ನವದೆಹಲಿ: ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ನಡುವಿನ ಸಮರ ಮತ್ತಷ್ಟು ಹೆಚ್ಚಾಗಿದೆ.ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಖಾತೆಯನ್ನು ಒಂದು ಗಂಟೆಗಳ ಕಾಲ ಇಂದು ತಡೆಹಿಡಿಯಲಾಗಿತ್ತು.
ಈ ವಿಚಾರವನ್ನು ರವಿಶಂಕರ್ ಪ್ರಸಾದ್ ಅವರು ಕೂನಲ್ಲಿ ತಿಳಿಸಿ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್
Advertisement
Advertisement
ಕಾಪಿರೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಖಾತೆಯನ್ನು ಲಾಕ್ ಮಾಡಲಾಗಿದೆ. ಆದರೆ ಇದು ಟ್ವಿಟ್ಟರ್ ನಿಯಮಕ್ಕೆ ವಿರುದ್ಧವಾಗಿದೆ. ಯಾವುದೇ ಖಾತೆಯನ್ನು ಲಾಕ್ ಮಾಡುವ ಮುನ್ನ ಬಳಕೆದರರಿಗೆ ನೋಟಿಸ್ ನೀಡಬೇಕಾಗುತ್ತದೆ ಆದರೆ ಟ್ವಿಟ್ಟರ್ ಈ ವಿಚಾರವನ್ನು ತಿಳಿಸದೇ ಲಾಕ್ ಮಾಡಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.