ಚೆನ್ನೈ: ನಟಿ ರಮ್ಯಾಕೃಷ್ಣರ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 100 ಮದ್ಯದ ಬಾಟೆಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಮ್ಯಾಕೃಷ್ಣ ಸದ್ಯ ತಮಿಳುನಾಡಿನ ಚೆನ್ನೈನಲ್ಲಿದ್ದಾರೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ. ರಮ್ಯಾಕೃಷ್ಣ ಪ್ರಯಾಣಿಸುತ್ತಿದ್ದ ಟೊಯೊಟಾ ಇನ್ನೋವಾ ಕಾರ್ ನ್ನು ಪೊಲೀಸರು ಚೆಕ್ ಪೋಸ್ಟ್ ಬಳಿ ತಡೆದು ಪರಿಶೀಲನೆ ನಡೆಸುವಾಗ ಮದ್ಯ ಸಿಕ್ಕಿದೆ. ಇನ್ನು ಪರಿಶೀಲನೆ ವೇಳೆ ರಮ್ಯಾಕೃಷ್ಣ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಪೊಲೀಸರು ರಮ್ಯಾಕೃಷ್ಣ ಅವರ ಕಾರಿನ ಚಾಲಕ ಸೆಲ್ವಕುಮಾರ್ ನನ್ನು ಬಂಧಿಸಿ, 100 ಮದ್ಯದ ಬಾಟೆಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತದನಂತರ ಸೆಲ್ವಕುಮಾರ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಪ್ರಕರಣ ಸಂಬಂಧ ರಮ್ಯಾಕೃಷ್ಣರ ಯಾವುದೇ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿಲ್ಲ.
Advertisement