ಬೆಂಗಳೂರು: ಬಂಧನದಲ್ಲಿರುವ ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರಲ್ಲಿ ಬಿಲ್ಡರ್ ಇನಿತ್ ಕುಮಾರ್ ಎಂಬವರಿಗೆ ಯುವರಾಜ್ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಇನಿತ್ ಕುಮಾರ್ ಅವರನ್ನ ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಮಾಡೋದಾಗಿ ಹೇಳಿ 30 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಮೊದಲಿಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಪೋಸ್ಟ್ ಗೆ ಮೂರು ಕೋಟಿ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ. ಅಷ್ಟು ಹಣ ಇಲ್ಲ ಎಂದಾಗ 2 ಕೋಟಿ, 50 ಲಕ್ಷ ಕೊನೆಗೆ 30 ಲಕ್ಷಕ್ಕೆ ಡೀಲ್ ಮಾಡಿಕೊಂಡು ನವೆಂಬರ್ ನಲ್ಲಿ ಹಣ ಪಡೆದುಕೊಂಡಿದ್ದನು.
Advertisement
Advertisement
ಡೀಲ್ ವೇಳೆ ಬಿ.ಎಲ್.ಸಂತೋಷ್ ಅವರ ಅಣ್ಣನ ಮಗ ಎಂದು ಯುವರಾಜ್ ಪರಿಚಯ ಮಾಡಿಕೊಂಡಿದ್ದನು. ನೀವು ಯುವಕರಿದ್ದೀರಿ ರಾಜಕೀಯಕ್ಕೆ ಬರಬೇಕು. ನಿಮ್ಮನ್ನ ರಾಷ್ಟ್ರ ಮಟ್ಟದಲ್ಲಿ ಯೂತ್ ಐಕಾನ್ ಮಾಡುತ್ತೇನೆ ಎಂದು ನಂಬಿಸಿದ್ದನು. ರೇಸ್ ಕೋರ್ಸ್ ರಸ್ತೆಯ ಐಷಾರಾಮಿ ಹೊಟೇಲ್ ನಲ್ಲಿ ಮೂರು ಸೀಟಿಂಗ್ ಹಾಕಿ ಹಣ ಡೀಲ್ ಮಾಡಿಕೊಳ್ಳಲಾಗಿತ್ತು. ಸದ್ಯ ಯುವರಾಜ್ ವಂಚನೆ ಬಗ್ಗೆ ಬಿಲ್ಡರ್ ಇನಿತ್ ಕುಮಾರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನ ಹೈಗ್ರೌಂಡ್ ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದಾರೆ.