– ಕ್ರಮಕೈಗೊಳ್ಳಬೇಕಾದ ಪೊಲೀಸರಿಂದ ರಾಜಿ ಸಂಧಾನ
– ಪೊಲೀಸರ ಕ್ರಮಕ್ಕೆ ಸ್ಥಳೀಯರು ಆಕ್ರೋಶ
ಮಂಡ್ಯ: ಲಾಕ್ಡೌನ್ ಅನ್ನು ಲೆಕ್ಕಿಸದೆ ಯುವಕರು ಕೆಆರ್ಎಸ್ ಹಿನ್ನೀರಿನಲ್ಲಿ ಯುವತಿಯರೊಂದಿಗೆ ಪಾರ್ಟಿ ನಡೆಸಲು ಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಹಿನ್ನೀರಿನಲ್ಲಿ ಮೈಸೂರು ಮೂಲದ ಯುವಕರು-ಯುವತಿಯರನ್ನು ಕರೆದುಕೊಂಡು ಮೋಜು-ಮಸ್ತಿ ಮಾಡಲು ಬಂದಿದ್ದಾರೆ. ಈ ವೇಳೆ ಇದನ್ನು ಕಂಡ ಸ್ಥಳೀಯರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆಗ ಯುವಕರು ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಕೆಆರ್ಎಸ್ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್ಎಸ್ ನೀರಿನಲ್ಲಿ ಮೋಜು-ಮಸ್ತಿ: ಭದ್ರತೆ ಲೆಕ್ಕಿಸದೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ಉದ್ಯಮಿ
Advertisement
Advertisement
ಸ್ಥಳಕ್ಕೆ ಬಂದ ಕೆಆರ್ಎಸ್ ಪೊಲೀಸರು ಯುವಕರಿಗೆ ಬೈದು ಬುದ್ಧಿ ಹೇಳುವ ಬದಲು ಸ್ಥಳೀಯರು ಮತ್ತು ಯುವಕರ ನಡುವೆ ರಾಜಿ ಮಾಡಿಸಲು ಮುಂದಾಗಿದ್ದಾರೆ. ಈ ಪ್ರಕರಣವನ್ನು ರಾಜಿ ಮಾಡಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾಜಿ ಮಾಡಿಸುವಂತೆ ಸ್ಥಳೀಯ ಪೊಲೀಸರಿಗೆ ಒತ್ತಡ ಹಾಕಿದ ಪರಿಣಾಮ ಪೊಲೀಸರು ಹೀಗೆ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ.
Advertisement
ಕೆಆರ್ಎಸ್ ಹಿನ್ನೀರಿನಲ್ಲಿ ನಿರ್ಬಂಧ ಇದ್ದರು ಸಹ ಪದೇ ಪದೇ ಈ ಸ್ಥಳದಲ್ಲಿ ಉಳ್ಳವರು ಮೋಜು-ಮಸ್ತಿ ಮಾಡುವ ಪ್ರಸಂಗಗಳು ನಡೆಯುತ್ತಲೇ ಇವೆ. ಪೊಲೀಸರು ಈ ಬಗ್ಗೆ ಶಿಸ್ತು ಕ್ರಮ ವಹಿಸುವ ಬದಲಿಗೆ ಉಳ್ಳವರ ಬೆನ್ನಿಗೆ ನಿಂತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೆಆರ್ಎಸ್ ನಲ್ಲಿ ಮೋಜು ಮಸ್ತಿ ಕೇಸ್- ಉದ್ಯಮಿ ವಿರುದ್ಧ ಎಫ್ಐಆರ್