ಮಂಡ್ಯ: ಯುವತಿಗೆ ಆಕೆಯ ಪ್ರಿಯಕರನ ವಿಳಾಸ ತೋರಿಸಿವ ಯುವಕನನ್ನ ಅಪಹರಿಸಿ ಕೊಲೆಗೈಯ್ಯಲಾಗಿದೆ. ಈ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಎಂಇಎಸ್ ಬಡಾವಣೆಯಲ್ಲಿ ಜರುಗಿದೆ.
ಶರತ್ ಕೊಲೆಯಾದ ಯುವಕ. ಒಂದು ವಾರದ ಹಿಂದೆ ಯುವತಿ ತನ್ನನ್ನು ಪ್ರೀತಿಸಿ ಮೋಸ ಮಾಡಿದ ಯುವಕನ ಫೋಟೋ ಹಿಡಿದು ಮಳವಳ್ಳಿಯಲ್ಲಿ ಸುತುತ್ತಿದ್ದಳು. ಈ ವೇಳೆ ಶರತ್ ಯುವತಿಗೆ ಫೋಟೋದಲ್ಲಿರುವ ಯುವಕನ ವಿಳಾಸ ಮತ್ತು ಮಾಹಿತಿ ನೀಡಿದ್ದನು.
Advertisement
Advertisement
ಶರತ್ ವಿಳಾಸ ತೋರಿಸಿದ ಎಂಬ ಕಾರಣಕ್ಕೆ ಇಂದು ನಾಲ್ಕು ಜನ ದುಷ್ಕರ್ಮಿಗಳು ಅಪಹರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಶರತ್ ಅಂದು ವಿಳಾಸ ತೋರಿಸಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.