ಪುಣೆ: ವಯೋವೃದ್ಧ ಆರ್ಎಸ್ಎಸ್ ಕಾರ್ಯಕರ್ತರೊಬ್ಬರಿಗೆ ಕೋವಿಡ್ ಪಾಸಿಟಿವ್ ಇದೆ. ತಮಗಾಗಿ ಮೀಸಲಿಟ್ಟ ಹಾಸಿಗೆಯನ್ನು ಕೊರೊನಾಪೀಡಿತ ಯುವಕನಿಗೆ ನೀಡಿ ನಾನು ಜೀವನ ನೋಡಿದ್ದೇನೆ ಎಂದು ಹೇಳುವ ಮೂಲಕವಾಗಿ ಎಲ್ಲರ ಗಮನ ಸೆಳೆದಿದ್ದಾರೆ.
Advertisement
ಮಹಾರಾಷ್ಟ್ರದ ನಾಗ್ಪುರ್ ನಿವಾಸಿ ನಾರಾಯಣ್ ದಾಬಡ್ಕರ್(85) ಅವರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆಗೆ ಮಹಿಳೆಯೊಬ್ಬರು ತನ್ನ ಪತಿಗೆ ಕೊರೊನಾ ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದರು. ಮಹಿಳೆಯ ಪರದಾಟವನ್ನು ನೋಡಿದ ನಾರಾಯಣ್ ಅವರು ತಮಗೆ ಮೀಸಲಾಗಿದ್ದ ಹಾಸಿಗೆಯನ್ನು ಆ ಮಹಿಳೆಯ ಪತಿಗೆ ಕೊಟ್ಟು ಮನೆಗೆ ಹೋಗಿದ್ದಾರೆ.
Advertisement
“मैं 85 वर्ष का हो चुका हूँ, जीवन देख लिया है, लेकिन अगर उस स्त्री का पति मर गया तो बच्चे अनाथ हो जायेंगे, इसलिए मेरा कर्तव्य है कि मैं उस व्यक्ति के प्राण बचाऊं।” ऐसा कह कर कोरोना पीडित @RSSorg के स्वयंसेवक श्री नारायण जी ने अपना बेड उस मरीज़ को दे दिया। pic.twitter.com/gxmmcGtBiE
— Shivraj Singh Chouhan (@ChouhanShivraj) April 27, 2021
Advertisement
ನಾನು 85 ವರ್ಷಗಳ ಕಾಲ ಜೀವನನ್ನು ನೋಡಿದ್ದೇನೆ. ಆದರೆ ಯುವಕ ಮೃತಪಟ್ಟರೆ ಆತನ ಕುಟುಂಬ ಅನಾಥವಾಗುತ್ತದೆ. ಹೀಗಾಗಿ ನನಗೆ ಮೀಸಲಿದ್ದ ಹಾಸಿಗೆಯನ್ನು ಅವರಿಗೆ ನೀಡುವಂತೆ ವೈದ್ಯರನ್ನು ನಾರಾಯಣ್ ಮನವಿ ಮಾಡಿದ್ದರು. ಚಿಕಿತ್ಸೆ ಪಡೆಯದೆ ಮನೆಗೆ ಹೋದ ನಾರಾಯಣ್ ಅವರು ಮೂರುದಿನಗಳ ನಂತರ ಅಸುನೀಗಿದ್ದಾರೆ. ಕೊರೊನಾಪೀಡಿತ ಯುವಕನನ್ನು ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.