ಒಮಾನ್: ಏಜೆಂಟ್ನಿಂದ ವಂಚನೆಗೊಳಗಾಗಿ ಯುಎಇಯ ಅಪಾರ್ಟ್ಮೆಂಟ್ ಒಂದರಲ್ಲಿ 64ಕ್ಕೂ ಹೆಚ್ಚಿನ ಭಾರತೀಯ ಕಾರ್ಮಿಕರು ಸಿಲುಕಿಕೊಂಡಿದ್ದರು. ಇದೀಗ ಅವರಲ್ಲಿ 49 ಕಾರ್ಮಿಕರಿಗೆ ಉದ್ಯೋಗ ನೀಡಿ ಸಹಾಯ ಮಾಡಲು 20 ಕಂಪನಿಗಳು ಮುಂದಾಗಿದೆ. ಉಳಿದವರನ್ನು ತಮ್ಮ ತಾಯ್ನಾಡಿಗೆ ಮರಳಿ ಕಳುಹಿಸಲಾಗಿದೆ.
Advertisement
ಈ ಪ್ರಕರಣವನ್ನು ನಿಭಾಯಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತರಾದ ಶಿರಾಲಿ ಶೇಖ್ ಮುಜಾಫರ್ ಮತ್ತು ಹಿದಾಯತ್ ಅಡೂರ್ರವರನ್ನು ಕಂಪನಿಗಳು ಸಂಪರ್ಕಿಸಿ ಕಾರ್ಮಿಕರ ಸಿವಿಗಳನ್ನು ಕಳುಹಿಸುವಂತೆ ತಿಳಿಸಲಾಯಿತು. ಕರ್ನಾಟಕದ ಎನ್ಆರ್ಐ ಅಧ್ಯಕ್ಷ ಮತ್ತು ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಒಡೆತನದ ಫಾರ್ಚೂನ್ ಪ್ಲಾಜಾ ಹೋಟೆಲ್ನಲ್ಲಿ ನಿರುದ್ಯೋಗಿಗಳಿಗೆ ಇಂಟರ್ ವ್ಯೂ ನಡೆಸಲಾಯಿತು. ಅಲ್ಲದೆ ತೊಂದರೆಗೀಡಾದ ಕಾರ್ಮಿಕರಿಗೆ ಹೋಟೆಲ್ನಲ್ಲಿ ಆಶ್ರಯ ನೀಡುವುದಾಗಿ ಭರವಸೆ ನೀಡಲಾಗಿದೆ.
Advertisement
https://t.co/OP5UmtPuqh. Khaleej time impact 49 workers secure job.. Thanks to @cgidubai @VPraveenfortune @khaleejtimes .
— Hidayath Addoor (@HidayathAddur) May 17, 2021
Advertisement
ಬಹುತೇಕ ಕಾರ್ಮಿಕರು ಬಡಗಿಗಳು ಮತ್ತು ಭಾರತ ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿಯ ಎಸಿ ತಂತ್ರಜ್ಞರಾಗಿದ್ದಾರೆ. ನುರಿತ ಕಾರ್ಮಿಕರ ಅವಶ್ಯಕತೆ ಹಲವಾರು ಕಂಪನಿಗಳಿಗಿದ್ದು, ಸಹಾಯ ಮಾಡಲು ಸಂತೋಷದಿಂದ ಒಪ್ಪಿಕೊಂಡಿದೆ. ಅವರಿಗೆ ವಸತಿ ಸೌಕರ್ಯಗಳನ್ನು ಮತ್ತು ಊಟದ ವ್ಯವಸ್ಥೆಯನ್ನು ಸಹ ಕಂಪನಿಯೇ ನೋಡಿಕೊಳ್ಳಲಿದೆ.