ಚೆನ್ನೈ: ಯುಎಇನಲ್ಲಿ 2021ರ ಐಪಿಎಲ್ ಮುಂದಿನ ಭಾಗ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಟ್ವೀಟ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗಿದ್ದಾರೆ.
Advertisement
14ನೇ ಆವೃತ್ತಿಯ ಐಪಿಎಲ್ನ ಮುಂದಿನ ಭಾಗವನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ಮಂಡಳಿಯ ವಿಶೇಷ ಮಹಾಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ನಿಧಾರವನ್ನು ಬಿಸಿಸಿಐ ಖಚಿತಪಡಿಸುತ್ತಿದ್ದಂತೆ, ಸಂತಸಗೊಂಡ ಸುರೇಶ್ ರೈನಾ, ಧೋನಿ ಮತ್ತು ತಾವು ಜೊತೆಗಿರುವ ಫೋಟೋ ಪೋಸ್ಟ್ ಮಾಡಿ ಮುಂದಿನ ಭೇಟಿ ದುಬೈನಲ್ಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಧೋನಿ ಬಗ್ಗೆ ಅಚ್ಚರಿ ಮಾತು – ಕೊಹ್ಲಿಗೆ ಅಭಿಮಾನಿಗಳಿಂದ ಚಪ್ಪಾಳೆ
Advertisement
See you soon Dubai ???????? @msdhoni @IPL @ChennaiIPL pic.twitter.com/5nWAZZ5BqJ
— Suresh Raina???????? (@ImRaina) May 29, 2021
Advertisement
ಸುರೇಶ್ ರೈನಾ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಸುರೇಶ್ ರೈನಾಗೆ ದುಬೈನಲ್ಲಿ ಬಾಲ್ಕನಿ ಹೊಂದಿರುವ ರೂಂ ಬುಕ್ ಮಾಡಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ಗೆ ಮನವಿ ಮಾಡುವ ಮೂಲಕ ಪರೋಕ್ಷವಾಗಿ ರೈನಾರ ಕಾಲೆಳೆದಿದ್ದಾರೆ. ಈ ರೀತಿ ಟ್ರೋಲ್ ಮಾಡಲು ಕಾರಣ ಇದೆ. ಕಳೆದ ಬಾರಿ 2020ರ ಐಪಿಎಲ್ ದುಬೈನಲ್ಲಿ ನಡೆದಾಗ ಸುರೇಶ್ ರೈನಾ ಟೂರ್ನಿ ಆರಂಭಕ್ಕೂ ಮೊದಲೇ ತಂಡವನ್ನು ತೊರೆದು ಮನೆ ಸೇರಿದ್ದರು. ಈ ವೇಳೆ ಅವರಿಗೆ ಸರಿಯಾದ ರೂಂ ವ್ಯವಸ್ಥೆ ಮಾಡದ ಕಾರಣ ಮುನಿಸಿಕೊಂಡು ತಂಡ ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಹಾಗಾಗಿ ಈ ಬಾರಿ ಮೊದಲೇ ಚೆನ್ನೈ ಫ್ರಾಂಚೈಸ್ಗೆ ನೆಟ್ಟಿಗರು ಬಾಲ್ಕನಿ ರೂಂನ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು
Advertisement
Make sure Chinna Thala Suresh Raina gets a room with a balcony @ChennaiIPL ???? , see you in UAE Lions ????.#IPL2021 #IPLinUAE
— 3rd Umpire (@drsoperator) May 29, 2021
ಆದರೆ ಕಳೆದ 13ನೇ ಆವೃತ್ತಿಯ ಐಪಿಎಲ್ನಿಂದ ಹಿಂದೆ ಸರಿಯಲು ತಮ್ಮ ವೈಯಕ್ತಿಕ ಕಾರಣ ಇತ್ತು ಎಂದು ರೈನಾ ಸ್ಪಷ್ಟ ಪಡಿಸಿದ್ದರು. ಆ ಬಳಿಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡದ ಪರ ರೈನಾ ಕಣಕ್ಕಿಳಿದಿದ್ದರು. ಆದರೆ 14ನೇ ಆವೃತ್ತಿಯ ಐಪಿಎಲ್ ಕೊರೊನಾದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಇದೀಗ ಮುಂದುವರಿದ ಭಾಗ ಮತ್ತೆ ದುಬೈನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್
ಈ ಮೂಲಕ ಮೂರನೇ ಬಾರಿ ದುಬೈನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆಯಲ್ಲಿದೆ. ಈ ಮೊದಲು 2014ರಲ್ಲಿ ಭಾರತದಲ್ಲಿ ಚುನಾವಣೆ ಇದ್ದ ಕಾರಣ ಮತ್ತು 2020ರಲ್ಲಿ ಕೊರೊನಾದಿಂದಾಗಿ ದುಬೈನಲ್ಲಿ ಟೂರ್ನಿ ನಡೆದಿತ್ತು. ಇದೀಗ ಮತ್ತೆ ಭಾರತದಲ್ಲಿ ಕೊರೊನಾದಿಂದಾಗಿ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಮತ್ತೆ ದುಬೈನಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.
????✅
????✅
????✅
Get your whistles ready for the second half at ????????!
????️ SEP-OCT!#IPL2021 #Whistlepodu #Yellove ???? pic.twitter.com/r23wtOpGOO
— Chennai Super Kings (@ChennaiIPL) May 29, 2021
ರೈನಾ, ಮುಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 7 ಪಂದ್ಯಗಳನ್ನು ಆಡಿ 1 ಅರ್ಧಶತಕ ಸಹಿತ 123 ರನ್ ಗಳಿಸಿದ್ದಾರೆ.