ಮುಂಬೈ: ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ದೇಶದ ಜನ ಈಗಾಗಲೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ನಾವು ಯಾವತ್ತು ಬಿಟ್ಟುಕೊಡುವುದುಬೇಡ ಎನ್ನುವ ಮೂಲಕ ಸೋಂಕಿತರಿಗೆ ಮತ್ತು ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ ಇನ್ನಷ್ಟು ಧೈರ್ಯ ತುಂಬಿದ್ದಾರೆ.
Advertisement
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪಂತ್, ದೇಶದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಕೊರೊನಾ ಸೋಂಕಿನ ವಿರುದ್ಧ ಜನ ಹೋರಾಡುತ್ತಿದ್ದಾರೆ. ಎಲ್ಲರೂ ಒಂದಾಗಿ ಹೋರಾಡೋಣ ಯಾವತ್ತು ಬಿಟ್ಟುಕೊಡುವುದು ಬೇಡ. ಎಲ್ಲರೂ ಒಂದಾಗೋಣ ಈ ಕಷ್ಟದ ಸಮಯವನ್ನು ಕಳೆಯೋಣ. ಜಾಗರೂಕತೆಯಿಂದ ಇರೋಣ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
Advertisement
View this post on Instagram
Advertisement
ಪಂತ್ ಈಗಾಗಲೇ ಕೊರೊನಾ ಲಸಿಕೆಯನ್ನು ಕೂಡ ಪಡೆದುಕೊಂಡಿದ್ದು, ಲಸಿಕೆ ಪಡೆದುಕೊಂಡ ವೇಳೆ ಎಲ್ಲರೂ ಆದಷ್ಟೂ ಬೇಗ ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು.
Advertisement
Got my first jab today. When you are eligible, please step up and get the vaccine. The sooner we do it, the sooner we can beat this Virus. pic.twitter.com/D8AC4WrESO
— Rishabh Pant (@RishabhPant17) May 13, 2021
ಪಂತ್ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಆಯ್ಕೆಯಾಗಿರುವ 20 ಜನರ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಈಗಾಗಲೇ ತಯಾರಿಯನ್ನು ಆರಂಭಿಸಿದ್ದಾರೆ. ಟೆಸ್ಟ್ ಚಾಂಪಿಯನ್ಶಿಪ್ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಇಂಗ್ಲೆಂಡ್ನಲ್ಲಿ ಜೂನ್ 18ರಿಂದ ಆರಂಭಗೊಳ್ಳಲಿದೆ.