– ಬೆರಳು ಕಚ್ಚಿ, ಇಕ್ಕಳದಿಂದ ತಲೆಗೆ ಹೊಡೆದ ಮಡದಿ
ಅಹಮದಾಬಾದ್: ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಕ್ಕಳ ಹಾಗೂ ಅಡುಗೆ ಸಾಮಾಗ್ರಿಯಿಂದ ಹಲ್ಲೆ ನಡೆಸಿದ ಪತ್ನಿ ವಿರುದ್ಧ ನೊಂದ ಪತಿ ದೂರು ದಾಖಲಿಸಿದ್ದಾರೆ.
ಅಹಮದಾಬಾದ್ನ ನರೋಡಾದಲ್ಲಿ ಘಟನೆ ನಡೆದಿದ್ದು, ರಿಯಲ್ ಎಸ್ಟೇಟ್ ಮಧ್ಯವರ್ತಿಯಾಗಿರುವ 34 ವರ್ಷದ ಅಭಯ್ಗೆ 26 ವರ್ಷದ ಪತ್ನಿ ಹಿಗ್ಗಾಮುಗ್ಗಾ ಥಳಿಸಿ, ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಇಕ್ಕಳಿನಿಂದ ತಲೆಗೆ ಬಲವಾಗಿ ಹೊಡೆದಿದ್ದಲ್ಲದೆ, ಕೋಪದಿಂದ ಪತಿಯ ಹೆಬ್ಬೆರಳನ್ನೇ ಕಚ್ಚಿದ್ದಾಳೆ.
Advertisement
Advertisement
ಘಟನೆಗೆ ಕಾರಣವೇನು?
ವ್ಯಕ್ತಿ ಪತ್ನಿ ಹಾಗೂ ಮೂರು ವರ್ಷದ ಮಗಳೊಂದಿಗೆ ವಾಸವಿದ್ದು, ಬುಧವಾರ ರಾತ್ರಿ 11ರ ಸುಮಾರಿಗೆ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ. ಊಟಕ್ಕೆ ಕುಳಿತಾಗ ಪತಿ ಸಂಜೆ ಸ್ನ್ಯಾಕ್ಸ್ ತಿನ್ನಲು ಯಾವ ಹೋಟೆಲ್ಗೆ ಹೋಗಿದ್ದೆ ಎಂದು ಪತ್ನಿಯನ್ನು ಪ್ರಶ್ನಿಸಿದ್ದಾನೆ. ಇದರಿಂದ ಕೋಪಕೊಂಡ ಪತ್ನಿ ಪ್ರಿಯಾಂಕಾ ಪತಿ ಅಭಯ್ ಮೇಲೆ ರೇಗಾಡಿ, ರಾದ್ಧಾಂತ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು ಹಲ್ಲೆ ಮಾಡಿದ್ದಾಳೆ ಎಂದು ಅಭಯ್ ಆರೋಪಿಸಿದ್ದಾರೆ.
Advertisement
Advertisement
ಕೇವಲ ಹಲ್ಲೆ ಮಾಡಿದ್ದು ಮಾತ್ರವಲ್ಲ, ವಾಗ್ವಾದ ನಡೆಯುವ ವೇಳೆ ಪ್ರಿಯಾಂಕಾ ನನ್ನ ಎಡಗೈ ಹಿಡಿದುಕೊಂಡಿದ್ದು, ಸಿಟ್ಟಿಗೆದ್ದು ಬೆರಳನ್ನೇ ಕಡಿದಿದ್ದಾಳೆ. ಕಚ್ಚುತ್ತಿದ್ದಂತೆ ತೀವ್ರ ನೋವುಂಟಾಗಿದ್ದು, ತಕ್ಷಣ ಅವಳನ್ನು ಹಿಂದಕ್ಕೆ ತಳ್ಳಿದೆ. ಇದರಿಂದ ಪ್ರಿಯಾಂಕಾ ಕೋಪಗೊಂಡು ಅಡುಗೆ ಮನೆಯಲ್ಲಿದ್ದ ಇಕ್ಕಳ ತಂದು ತೆಲೆಗೆ ಜೋರಾಗಿ ಹೊಡೆದಳು. ಇದರಿಂದ ತೀವ್ರ ರಕ್ತಸ್ರಾವವಾಯಿತು ಎಂದು ಅಭಯ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ರಕ್ತಸ್ರಾವದಿಂದ ತೀವ್ರ ಗಾಯಗೊಂಡಿದ್ದ ಅಭಯ್ನನ್ನು ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದ ನಂತರ ಅಭಯ್ ನರೋಡಾ ಪೆÇಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾರೆ. ಅಭಯ್ ಗುಜರಾತ್ ಮೂಲದವನಾಗಿದ್ದು ಪ್ರಿಯಾಂಕಾ ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದೆ.