ಚಿಕ್ಕಮಗಳೂರು: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆಗೆ ನಿರಾಕರಿಸಿವ ಶಾಸಕ ಕುಮಾರಸ್ವಾಮಿ, ನಿಗಮ ಮಂಡಳಿ, ಸರ್ಕಾರದ ಕಾರು ಯಾವುದು ಬೇಡ, ಸಾಯಲಿ ಬಿಡಿ ಎಂದು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಯಾವ ನಿಗಮ ಮಂಡಳಿಯೂ ಏನೂ ಬೇಡ ಸಾಯಲಿ ಬಿಡಿ, ನನಗೆ ಸರ್ಕಾರದ ಕಾರು, ಅಧಿಕಾರ ಬೇಡ ನನ್ನ ಕ್ಷೇತ್ರಕ್ಕೆ ಗ್ರ್ಯಾಂಟ್ ಕೊಟ್ಟರೆ ಸಾಕು ನನಗೆ ಸರ್ಕಾರಿ ವಾಹನದ ಅಗತ್ಯ ಇಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನಾಲ್ವರನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೈ ಬಿಟ್ಟ ಸರ್ಕಾರ
Advertisement
Advertisement
ಎಂ.ಪಿ.ಕುಮಾರಸ್ವಾಮಿ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷನ ನೀಡಿರೋದಕ್ಕೆ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟು ದೊಡ್ಡ ಹುದ್ದೆ ಕೊಟ್ಟರೆ ಹೇಗೆ, ನನಗೆ ಏನೂ ಬೇಡ ನನಗೆ ಯಾವುದೂ ಬೇಡ, ನಾನು ಯಾವ ನಿಗಮ ಮಂಡಳಿಯನ್ನೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ
Advertisement
Advertisement
ಸರ್ಕಾರ ರಚನೆಯಾಗಿ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ. ಆಗಲೂ ಅಸಮಾಧಾನ ಏನಿಲ್ಲ. ಮೂರು ಬಾರಿ ಶಾಸಕ ಆಗಿದ್ದೇನೆ, ನನ್ನನ್ನೂ ಸಚಿವ ಸ್ಥಾನಕ್ಕೆ ಪರಿಗಣಿಸಬೇಕಿತ್ತು. ಮುಂದೆ ಸಿಗಬಹುದು ನೋಡೋಣ ಎಂದಿದ್ದರು. ಆದರೆ ಈಗ ನಿಗಮ ಮಂಡಳಿಗೆ ನೇಮಕ ಮಾಡಿರೋದ್ರಿಂದ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.