ಬೆಂಗಳೂರು: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ದುರಂತ ಸಾವಿಗೆ ಇಡೀ ಬಾಲಿವುಡ್ ಸೇರಿದಂತೆ ಇಡೀ ದೇಶದ ಚಿತ್ರರಂಗವೇ ಕಂಬನಿ ಮಿಡಿದಿದೆ. ಸ್ಯಾಂಡಲ್ವುಡ್ನ ಹಲವು ನಟ ನಟಿಯರು ಸಹ ಧೋನಿ ಸಿನಿಮಾ ಖ್ಯಾತಿಯ ನಟನಿಗೆ ಕಂಬನಿ ಮಿಡಿದಿದ್ದಾರೆ. ಇಂತಹ ನಿರ್ಧಾರ ಮಾಡಬಾರದಿತ್ತು ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ನಿರೂಪಕಿ ಅನುಶ್ರೀ ಸಹ ಭಾವನಾತ್ಮ ಸಾಲುಗಳ ಮೂಲಕ ನಟನಿಗೆ ವಿದಾಯ ಹೇಳಿದ್ದಾರೆ.
Advertisement
ನಟಿ ಅನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ವಿಚಾರಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ವಿಭಿನ್ನ ಶೈಲಿಯ ನಿರೂಪಣೆ ಮೂಲಕ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಸಹ ಹೊಂದಿದ್ದಾರೆ. ಸ್ಯಾಂಡಲ್ವುಡ್ನ ನೋವು ನಲಿವಿನ ವಿಚಾರಗಳ ಕುರಿತು ಸಹ ಅನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇದೀಗ ಸುಶಾಂತ್ ಆತ್ಮಹತ್ಯೆ ಕುರಿತು ಸುಧೀರ್ಘ ಸಾಲುಗಳನ್ನು ಬರೆದಿದ್ದಾರೆ.
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಫೋಟೋ ಹಾಕಿ ಮನಮುಟ್ಟುವ ಸಾಲುಗಳನ್ನು ಬರೆದಿರುವ ಅನುಶ್ರೀ, ಯಾವ ನಗುವಿನ ಹಿಂದೆ ಯಾವ ನೋವಿರತ್ತೋ?? ಯಾರು ಬಲ್ಲರು. 2020 ಮರೆಯಾಲಾರದ, ಮರೆಸಲಾರದ, ಕ್ಷಮಿಸಲಾಗದ ವರ್ಷ. ಒಂಟಿತನ ಹಾಗೂ ಮಾನಸಿಕ ಖಿನ್ನತೆ ಕೊರೊನಾ ವೈರಸ್ಗಿಂತ ಅಪಾಯಕಾರಿ. ಎಷ್ಟು ಮಾನಸಿಕ ನೋವು ಈ ಅದ್ಭುತ ನಟನನ್ನು ಕಾಡಿತ್ತೋ ಏನೋ, ನುಂಗಲಾರದೆ, ಹೇಳಲಾರದೆ ಅದೆಷ್ಟು ನೋವು ಈ ಜೀವ ಅನುಭವಿಸಿತ್ತೋ ಏನೋ ಬರೆದುಕೊಂಡಿದ್ದಾರೆ.
Advertisement
ಈ ಮೂಲಕ ಒಂದು ಸಣ್ಣ ವಿನಂತಿ ಹೀಯಾಳಿಸೋದು, ಕೆಟ್ಟದಾಗಿ ಹೇಳೋದು, ಕಮೆಂಟ್ ಮಾಡೋದು, ಅಯ್ಯೋ ಇವನು, ಇವಳು ಹಾಗೆ ಹೀಗೆ ಎಂದು ನಿಂದಿಸುವುದು, ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಹೇಳುವ ಅಶ್ಲೀಲ ಹೇಳಿಕೆಗಳನ್ನು ಹೇಳುವಾಗ, ಅವರ ಹಿಂದೆ ಮಾತಾಡುವಾಗ ಮತ್ತು ಕಮೆಂಟ್ ಮಾಡುವಾಗ ಒಮ್ಮೆ ಯೋಚಿಸಿ. ವಾಟ್ ದೆ ಗೋ ಥ್ರೂ… ಕೆಲವರನ್ನು ಇಲ್ಲವಾಗಿಬಿಡಿಸುತ್ತೆ ನಿಮ್ಮ ಮಾತುಗಳು ಎಂದು ಸಲಹೆ ನೀಡಿದ್ದಾರೆ.
ಒಬ್ಬರ ಕಲೆ ಮತ್ತು ಪ್ರತಿಭೆಯಿಂದ ಅವನ ಬೆಲೆ ಅಥವಾ ಗೌರವ ಇರುತ್ತೇ ಹೊರತು ಅವನ ಸಕ್ಸಸ್ ಅಥವಾ ಫೇಲ್ಯೂರ್ನಿಂದಲ್ಲ. ಕೊನೆಯದಾಗಿ ಎಲ್ಲ ಮನಸ್ತಾಪಗಳನ್ನು ದೂರ ಇಡಿ. ಇವತ್ತು ನಿಮ್ಮ ಸ್ನೇಹಿತರಿಗೋ ಅಥವಾ ಸಂಬಂಧಿಕರಿಗೋ, ಮನೆಯವರಿಗೋ ಕರೆ ಮಾಡಿ ಮಾತಾಡಬೇಕೆಂದೆನಿಸಿದರೆ ಮಾಡಿ. ಇನ್ನೊಬ್ಬರ ಮಾತಿಗೆ ಕಿವಿಯಾಗಿ. ಯಾಕಂದ್ರೆ ನಾಳೆ ಅವರಿಲ್ಲವಾಗಬಹುದು ಎಂಬ ಭಾವನಾತ್ಮ ಸಾಲುಗಳನ್ನು ಬರೆದಿದ್ದಾರೆ.
ಜೂನ್ 14ರಂದು ಸುಶಾಂತ್ ನಿಧನರಾಗಿದ್ದು, ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಶಾಂತ್ ಸಿಂಗ್ ಬಳಸುತ್ತಿದ್ದ ಮೊಬೈಲ್ ಸಹ ಪರಿಶೀಲನೆ ನಡೆಸಿದ್ದಾರೆ. ಸುಶಾಂತ್ ಸ್ನೇಹಿತರು ಈ ಕುರಿತು ಮಾಹಿತಿ ನೀಡಿದ್ದು, ಸುಶಾಂತ್ಗೆ ವಿವಾಹವಾಗುವುದು ಇಷ್ಟವಿರಲಿಲ್ಲ. ತಂದೆಯ ಒತ್ತಾಯದ ಮೇರೆಗೆ ವಿವಾಹವಾಗಲು ಒಪ್ಪಿಕೊಂಡಿದ್ದರು. ಲಾಕ್ಡೌನ್ ವೇಳೆ ಭಾವಿ ಪತ್ನಿಯ ಮನೆಯಲ್ಲೇ ಇದ್ದ ಸುಶಾಂತ್ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎಂದು ತಿಳಿಸಿದ್ದಾರೆ.