ಅಬುಧಾಬಿ: ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದ ಸನ್ರೈಸರ್ಸ್ ಆಟಗಾರ ನಟರಾಜನ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 29 ವರ್ಷದ ಎಡಗೈ ವೇಗಿ ಟಿ.ನಟರಾಜನ್ ಪತ್ನಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಯಾರ್ಕರ್ ಎಸೆತದ ಮೂಲಕ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದ ನಟರಾಜನ್ ಪಂದ್ಯಕ್ಕೆ ತಿರುವು ನೀಡಿದ್ದರು. ಬೆಂಗಳೂರು ಪರ ಏಕಾಂಗಿ ಹೋರಾಟ ಮಾಡುತ್ತಿದ್ದ ಎಬಿಡಿ ಔಟಾಗುತ್ತಿದಂತೆ ಭಾರೀ ಸ್ಕೋರ್ ಗಳಿಸಿರುವ ಅವಕಾಶವನ್ನು ತಂಡ ಕಳೆದುಕೊಂಡಿತ್ತು.
Advertisement
Advertisement
ಪಂದ್ಯದ ಬಳಿಕ ಮಾತನಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ನಟರಾಜನ್ ಹಾಗೂ ಅವರ ಪತ್ನಿಗೆ ಶುಭಾಶಯ ಕೋರಿದ್ದರು. ನಟರಾಜನ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟರಾಜನ್ ಮಗು ಜನಿಸಿದ ಸಂತಸದಲ್ಲಿದ್ದಾರೆ. ಅವರಿಗೆ ಫೈನಲ್ ಪಂದ್ಯಕ್ಕೂ ಮುನ್ನ ವಿಶೇಷ ಗಿಫ್ಟ್ ಲಭಿಸಿದೆ ಎಂದು ವಾರ್ನರ್ ತಿಳಿಸಿದ್ದರು.
Advertisement
Advertisement
ತಮಿಳುನಾಡಿನ ಚೆನ್ನೈನಿಂದ ಸುಮಾರು 340 ಕಿಮೀ ದೂರದ ಸೇಲಂ ಜಿಲ್ಲೆಯ ಸಣ್ಣ ಹಳ್ಳಿ ಚೆನ್ನಪ್ಪಂಪಟ್ಟಿ ಗ್ರಾಮದವರು. ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನಟರಾಜನ್ ಅಲ್ಲಿಯೇ ತಮ್ಮ ಬೌಲಿಂಗ್ ಕೌಶಲ್ಯಗಳನ್ನು ಮೆರೆಗುಗೊಳಿಸಿದ್ದರು. ಉಳಿದಂತೆ ನಟರಾಜನ್ ತಾಯಿ ಹಾಗೂ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ನಟರಾಜನ್ ಅವರನ್ನು ಬಳಿಕ ಸನ್ರೈಸರ್ಸ್ ಹೈದಾರಾಬಾದ್ ತಂಡ ಖರೀದಿ ಮಾಡಿತ್ತು. ಸದ್ಯ ನಟರಾಜನ್ ಯಾರ್ಕರ್ ಗೆ ಫಿದಾ ಆಗಿರುವ ಕ್ರಿಕೆಟ್ ವಿಶ್ಲೇಷಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆತನನ್ನು ಯಾರ್ಕರ್ ನಟರಾಜನ್ ಎಂದು ಕರೆದರೆ ಉತ್ತಮವಾಗಿರುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದಾರೆ.
#IPL2020 #Eliminator #SRHvRCB #RCBvSRH : Yorker Natarajan gets ABD bowled pic.twitter.com/bqqTDmgjZ3
— IPL 2020 HIGHLIGHT (@ipl2020highlite) November 6, 2020