ಬೆಂಗಳೂರು: ಕೊರೊನ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಲೆಬ್ರಿಟಿಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ತಮ್ಮವರನ್ನ ಕಳೆದುಕೊಂಡು ಅನೇಕರು ಕಷ್ಟ ಪಡುತ್ತಿದ್ದಾರೆ. ನಟ ಜಿಮ್ ರವಿ ತನ್ನ ಸ್ನೇಹಿತರೊಬ್ಬರು ನಿಧಿನರಾಗಿದ್ದರು. ಈ ವೇಳೆ ರುದ್ರಭೂಮಿಗೆಯಲ್ಲಿ ರವಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.
Advertisement
ಮೃತರ ಅಂತ್ಯಕ್ರಿಯೆಗಾಗಿ ಕುಟುಂಬದವರು ಸಾಲುಗಟ್ಟಿ ನಿಂತಿರುವ ದೃಶ್ಯ ನೋಡಿದರೆ ಮನ ಕಲಕುತ್ತದೆ. ವೀಡಿಯೋದಲ್ಲಿ ರವಿ ಅವರು ಸ್ಮಶಾನದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ನೂರಾರು ಶವಗಳನ್ನು ಸುಡುತ್ತಿರುವ ದೃಶ್ಯ ಭೀಕರತೆಯನ್ನು ಕಣ್ಣಿಗೆ ಕಟ್ಟುತ್ತದೆ.
Advertisement
Advertisement
ಸಾವಿರಾರು ಜನರು ಸಾಯುತ್ತಿದ್ದಾರೆ ನೋಡಿ. ಇವತ್ತು ನನ್ನ ಸ್ನೇಹಿತರು ತೀರಿಕೊಂಡರು. ಅವರ ಅಂತ್ಯಕ್ರೀಯೆಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ತುಂಬಾ ದುಃಖವಾಗುತ್ತದೆ. ಎಲ್ಲರೂ ಮನೆಯಲ್ಲಿಯೇ ಇರಿ. ಆಗ ನಮಗೆ ಒಳ್ಳೆಯದಾಗುತ್ತದೆ. ತಂದೆ-ತಾಯಿಯನ್ನು ನೀವು ಕಾಪಾಡಿಕೊಳ್ಳಬಹುದು. ಇವತ್ತು ಬೆಂಗಳೂರಿನ ಪರಿಸ್ಥಿತಿ ಹೀಗಾಗಿದೆ. ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಸಾಮಾಜಿ ಅಂತರವನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.
Advertisement
ಇಲ್ಲಿ ಸಾಲು ಸಾಲು ಶವಗಳು ಬರುತ್ತಿವೆ. ಎಲ್ಲರೂ ನಿಮ್ಮ ಕ್ಷೇಮವನ್ನು ಕಾಪಾಡಿಕೊಳ್ಳಿ. ಮಾಸ್ಕ್ ಸ್ಯಾನಿಟೈಸರ್ ಉಪಯೋಗಿಸಿ, ಉಡಾಫೆ ಮಾತುಬೇಡ. ಸರ್ಕಾರ ಯಾರೋ ಸತ್ತರು ಎಂದು ರಜೆ ಕೊಡುತ್ತಿತ್ತು. ಆದರೆ ಈಗ ನಾವು ಬದುಕಲಿ ಅಂತ ರಜೆ ಕೊಟ್ಟಿದ್ದಾರೆ. ಯೋಚನೆ ಮಾಡಿ ನಮ್ಮ ಪ್ರಾಣ ನಮ್ಮ ಕೈಯಲ್ಲಿದೆ ಎಂದು ಜಿಮ್ ರವಿ ಎಚ್ಚರಿಕೆಯನ್ನು ಹೇಳಿದ್ದಾರೆ.
ಚಿತ್ರರಂಗದ ಅನೇಕರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಕೊರೊನಾ ಕುರಿತಾಗಿ ಹಲವರು ಜಾಗೃತಿ ಮೂಡಿಸುವ ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.