ಭೋಪಾಲ್: ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಕುರಿತು, ಯಾರಿಗೆ ವಯಸ್ಸಾಗಿರುತ್ತೋ ಅವರು ಸಾಯ್ತರೆ ಬಿಡಿ’ ಎಂದು ಮಧ್ಯಪ್ರದೇಶದ ಸಚಿವ ಪ್ರೇಮ್ ಸಿಂಗ್ ಪಾಟೀಲ್ ವಿವಾದತ್ಮಾಕ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ. ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಪ್ರೇಮ್ ಸಿಂಗ್ ಪಾಟೀಲ್, ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವುದರ ಬಗ್ಗೆ ನಾನು ಒಪ್ಪಿಕೊಳ್ಳುತ್ತೇನೆ. ಯಾರು ಕೂಡ ಇದನ್ನು ತಡೆಯಲು ಸಾಧ್ಯವಿಲ್ಲ. ಯಾರಿಗೆ ವಯಸ್ಸು ಆಗಿರುತ್ತದೋ ಅವರು ಸಾಯುತ್ತಾರೆ. ನಾನೊಬ್ಬನೆ ಈ ಕುರಿತು ಈ ರೀತಿ ಹೇಳುತ್ತಿಲ್ಲ ಎಲ್ಲರ ಅಭಿಪ್ರಾಯವು ಇದೆ ರೀತಿ ಇದೆ. ನಾವೆಲ್ಲರು ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕಾಗಿದೆ ಎಂದರು.
Advertisement
#WATCH: MP Minister Prem Singh Patel speaks on deaths due to #COVID19. He says, "Nobody can stop these deaths. Everyone is talking about cooperation for protection from Corona…You said that many people are dying every day. People get old and they have to die." (14.04.2021) pic.twitter.com/os3iILZGyM
— ANI (@ANI) April 15, 2021
Advertisement
ಕೊರೊನಾದಿಂದಾಗಿ ರಾಜ್ಯದಲ್ಲಿ ಆಗುತ್ತಿರುವ ಮರಣದ ಕುರಿತಾಗಿ ಈಗಾಗಲೇ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿದೆ. ರಾಜ್ಯದ ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಬೇಕು. ನಾವು ರಾಜ್ಯದಲ್ಲಿ ಈಗಾಗಲೇ ಮುಂಜಾಗೃತ ಕ್ರಮವಾಗಿ ಹೆಚ್ಚಿನ ವೈದ್ಯರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
Advertisement
ಕೊರೊನಾ ಸೋಂಕಿತರ ಸಾವಿನ ವಿಚಾರವಾಗಿ ಪ್ರೇಮ್ ಸಿಂಗ್ ಪಾಟೀಲ್ ಅವರಿಂದ ಉಡಾಫೆ ಉತ್ತರ ಕೇಳಿ ಬರುತ್ತಿದ್ದಂತೆ ಸಚಿವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೋಂಕಿತರಿಗೆ ಧೈರ್ಯ ತುಂಬಬೇಕಾಗಿರುವ ಸಚಿವರಿಂದಲೇ ಈ ರೀತಿ ಮನೋಬಲ ಕುಗ್ಗಿಸೋ ಹೇಳಿಕೆ ವಿರೋಧಿಸಿ ಜನ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ ಸೇರಿದಂತೆ ದೇಶದಲ್ಲಿ ಕಳೆದ ಒಂದೇ ದಿನ 2,00,739 ಕೊರೊನಾ ಪ್ರಕರಣಗಳು ದೃಢಪಟ್ಟಿತ್ತು. ಹಾಗೆ ಮಧ್ಯಪ್ರದೇಶ, ಉತ್ತರ ಪ್ರದೇಶ, ಡೆಲ್ಲಿ, ಗುಜಾರಾತ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಹಲವು ರೀತಿಯ ಸಮಸ್ಯೆಗಳು ಕೂಡ ಎದುರಾಗಿತ್ತು. ಮಧ್ಯಪ್ರದೇಶ ಒಂದರಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದಾಗಿ 51 ಮರಣ ಪ್ರಕರಣಗಳು ವರದಿಯಾಗಿದೆ.