ಹಾವೇರಿ: ಯಡಿಯೂರಪ್ಪನವರ ಖುರ್ಚಿ ಭದ್ರವಾಗಿದೆ. ಸಿಎಂ ಖುರ್ಚಿ ಖಾಲಿ ಇಲ್ಲ. ಅವರೆ ಮುಂದುವರಿಯುತ್ತಾರೆ. ಇನ್ನು ಎರಡು ವರ್ಷಗಳ ಕಾಲ ಯಡಿಯೂರಪ್ಪನವರೆ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆ ಸಹ ಯಡಿಯೂರಪ್ಪನವರ ನಾಯಕತ್ವದಲ್ಲೇ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣಿಸಿ- ಡಿಸಿಎಂಗೆ ಸುರೇಶ್ ಕುಮಾರ್ ಮನವಿ
Advertisement
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರ್ಯಾರೋ ಎಲ್ಲೆಲ್ಲೋ ಮಾತನಾಡುತ್ತಾರೆ ಅಂತಾ ಅದಕ್ಕೆಲ್ಲ ಉತ್ತರ ಕೊಡೋಕೆ ಆಗೋದಿಲ್ಲ. ಸಿ.ಪಿ.ಯೋಗೇಶ್ವರಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಈಗ ಅದನ್ನ ಮಾತನಾಡೋ ವಿಚಾರವಲ್ಲ. ಅದನ್ನ ಮಾತಾಡೋಕೆ ರಾಜ್ಯದ, ರಾಷ್ಟ್ರದ ಅಧ್ಯಕ್ಷರಿದ್ದಾರೆ. ಅವರೆ ಮಾತಾಡ್ತಾರೆ, ನಾವು ಕೊರೊನಾ ಬಗ್ಗೆ ಮಾತಾಡೋಣ ಎಂದರು. ಇದನ್ನೂ ಓದಿ: ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯಕ್ಕೆ ಅಸಲಿ ಕಾರಣವೇನು ಗೊತ್ತಾ?
Advertisement
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಎಮ್ಮಿಗನೂರು ಗ್ರಾಮದಲ್ಲಿ, ಮಹಾಮಾರಿ ಕೊರೋನಾ ಸೋಂಕಿನಿಂದ ಮೃತಪಟ್ಟ ಗಿರಿಜಮ್ಮ ಚಿಕ್ಕಬಾಸೂರ್ ಅವರ ಕುಟುಂಬ ಸದಸ್ಯರನ್ನು ಇಂದು ಭೇಟಿಯಾಗಿ, ದುಃಖದಲ್ಲಿರುವ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ, ವೈಯಕ್ತಿಕವಾಗಿ 50 ಸಾವಿರ ರೂಪಾಯಿಗಳ ಸಹಾಯಧನವನ್ನು ನೀಡಿದೆ.#Haveri | #Hirekerur pic.twitter.com/nKCYUjF1Fg
— Kourava B.C.Patil (@bcpatilkourava) June 5, 2021
Advertisement
Advertisement
ಮೈಸೂರಿನಲ್ಲಿ IAS ಅಧಿಕಾರಿಗಳು ಬಹಿರಂಗವಾಗಿ ಸಾರ್ವಜನಿಕವಾಗಿ ಕಿತ್ತಾಡೋದು ಸರಿಯಲ್ಲ. ಅಧಿಕಾರಿಗಳು ನಿಯಮಗಳ ಅಡಿ ಕೆಲಸ ಮಾಡಬೇಕು. ಯಾರೂ ಸರ್ಕಾರಕ್ಕಿಂತ, ಇಲಾಖೆಗಿಂತ ದೊಡ್ಡವರಲ್ಲ. ಅವರ ಇತಿಮಿತಿ ಅರಿತು ಕೆಲಸ ಮಾಡಬೇಕು. ಈ ರೀತಿ ಬೀದಿರಂಪ ಮಾಡುವುದರಿಂದ ಸರ್ಕಾರದ ಘನತೆಗೆ ಕುಂದು ಬರುತ್ತದೆ. ನಮ್ಮ ಮುಖ್ಯಮಂತ್ರಿಗಳು ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಲ್ಪಾ ನಾಗ್ ರಾಜೀನಾಮೆ ಬೆನ್ನಲ್ಲೇ ಹೊಸ ಟೆನ್ಶನ್ -ಕಠಿಣ ನಿರ್ಧಾರಕ್ಕೆ ಬಂದ್ರಾ ಜಿಲ್ಲಾ ಉಸ್ತುವಾರಿ ಸಚಿವ?
ರಾಜ್ಯದಲ್ಲಿ ಎಲ್ಲೂ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. ಕೃತಕ ಅಭಾವ ಸೃಷ್ಟಿಸೋರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೃತಕ ಅಭಾವ ಸೃಷ್ಟಿಸಿದರೆ ಪೊಲೀಸ್ ಕೇಸ್ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.