– ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ
– ಅರುಣ್ ಸಿಂಗ್ ಮುಂದೆ ವಿಶ್ವನಾಥ್ ಬೇಡಿಕೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ ಎಂದು ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.
Advertisement
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅರುಣ್ ಸಿಂಗ್ ಭೇಟಿ ಮಾಡಿದೆ. ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಸ್ತುಸ್ಥಿತಿ ಹೇಳಿದ್ದೇನೆ. ನಮಗೆ ಮಂತ್ರಿಗಿರಿ ಸಿಕ್ಕಿಲ್ಲ ಅನ್ನೋ ಬೇಸರವಿಲ್ಲ. ಈ ಬಗ್ಗೆ ನಾನು ದೂರುತ್ತಿಲ್ಲ. ಅರುಣ್ ಸಿಂಗ್ ಅವರಿಗೆ ಪಕ್ಷದ ವಸ್ತುಸ್ಥಿತಿಯನ್ನು ಆಳವಾಗಿ ತಿಳಿಸಿದ್ದೇನೆ. ನಾನು ಯಾರ ಬಣವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ ಎಂದರು.
Advertisement
Advertisement
ನಾನು ಪ್ರಧಾನಿಗಳ ಜತೆ ನೇರ ಸಂಪರ್ಕ ಇಟ್ಕೊಂಡಿದ್ದೇನೆ. ಜೆಡಿಎಸ್ ನಲ್ಲಿ ರಾಜೀನಾಮೆ ಕೊಟ್ಟು, ಹಲವು ವಿಚಾರ ವಿರೋಧ ಮಾಡಿ ಬಂದೆವು. ಬಿಜೆಪಿಯಲ್ಲೂ ಅವೇ ವಿಚಾರಗಳಿವೆ. ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ರಾಕ್ಷಸ ರಾಜಕಾರಣ ಇಲ್ಲೂ ಕಾಣ್ತಿದ್ದೇವೆ. ಯಡಿಯೂರಪ್ಪ ಮಾಡಿದ ಕೆಲಸಗಳ ಬಗ್ಗೆ ಗೌರವ ಇದೆ. ಆದರೂ ಇವತ್ತಿನ ಪ್ರಶ್ನೆ ಯಡಿಯೂರಪ್ಪ ಬಗ್ಗೆ ಅಲ್ಲ ಎಂದು ತಿಳಿಸಿದರು.
Advertisement
ಹೈಕಮಾಂಡ್ ಎಸ್ ಅಂದ್ರೆ ರಾಜೀನಾಮೆಗೆ ಸಿದ್ಧ ಅಂತ ಖುದ್ದು ಬಿಎಸ್ವೈ ಅವರೇ ಹೇಳಿದ್ದಾರೆ. ಆ ಪ್ರಕಾರ ಆಗಿ ಅವರು ಪಕ್ಷದಲ್ಲಿ ಮಾರ್ಗದರ್ಶಕರಾಗಿ ಮುಂದುವರಿಯಲಿ. ವೀರಶೈವ ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನಿಗೆ ಅವಕಾಶ ಮಾಡಿಕೊಡಲಿ. ಮಠಾಧಿಪತಿಗಳು ಬಸವತತ್ವ ಮೀರಿ ಹೋಗಬಾರದು. ಇನ್ನೊಬ್ಬ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಿ. ಪಂಚಮಸಾಲಿಸಮುದಾಯದವರನ್ನೇ ಸಿಎಂ ಮಾಡಲಿ. ಅವರಿಗೊಂದು ಅವಕಾಶ ಕೊಡಲಿ. ಲಿಂಗಾಯತ ಮಠಾಧೀಶರಿಗೆ ವಿಶ್ವನಾಥ್ ಮನವಿ ಮಾಡಿದರು.
ಪಂಚಮಸಾಲಿಯಲ್ಲಿ ನಿರಾಣಿ, ಯತ್ನಾಳ್, ಬೆಲ್ಲದ್ ಇದ್ದಾರೆ. ಯಂಗ್ ಸ್ಟರ್ ಬೇಕಾದರೆ ಬೆಲ್ಲದ್ ಮಾಡಿ. ಮಧ್ಯ ವಯಸ್ಕ ಬೇಕಾದರೆ ನಿರಾಣಿಯವರನ್ನ ಮಾಡಿ. ಎಲ್ಲದಕ್ಕೂ ಬೇಕು ಅಂದ್ರೆ ಯತ್ನಾಳ್ ಅವರನ್ನ ಮಾಡಿ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್ಶೀಟ್ ಏನು?
ಸಿಎಂ ಬದಲಾವಣೆಗೆ ವಿಶ್ವನಾಥ್ ಬೇಡಿಕೆ:
ಅರುಣ್ ಸಿಂಗ್ ಮುಂದೆ ಸಿಎಂ ಬದಲಾವಣೆ ಮಾಡುವಂತೆ ವಿಶ್ವನಾಥ್ ಬೇಡಿಕೆ ಇಟ್ಟಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶಕರಾಗಿರಲಿ. ಪಂಚಮಸಾಲಿ ಸಮುದಾಯದವರಿಗೆ ಅವಕಾಶ ಕೊಡಲಿ. ಒಂದು ಉತ್ತಮ ತಂಡವನ್ನ ಕೊಡಲಿ. ಯಡಿಯೂರಪ್ಪ ಮಾರ್ಗದರ್ಶಕರಾಗಿರಲಿ. ಅವರ ಜಾಗಕ್ಕೆ ಮತ್ತೊಬ್ಬ ನಾಯಕರು ಬರಲಿ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗಲಿ ಎಂದು ಬೇಡಿಕೆ ಇಟ್ಟಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.