ಬೆಂಗಳೂರು: ಕೊರೊನಾ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಸ್ಥಾಪಿಸಿದ ‘ಪಿಎಂ ಕೇರ್ಸ್’ ನಿಧಿಗೆ ಅಪ್ಪ ಅಮ್ಮನೆ ಇಲ್ಲವಂತೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಕೊರೊನಾ ಹೆಸರಲ್ಲಿ ಪ್ರಧಾನಿ ಮೋದಿ ಅವರು ಸಂಗ್ರಹಿಸಿದ ಹಣವನ್ನು ತಮ್ಮ ಮನೆಯ ಖರ್ಚಿಗೆ ಬಳಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುವ ಮೂಲಕ ಪಿಎಂ ಕೇರ್ ಫಂಡ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.
Advertisement
Advertisement
“ಕೊರೊನಾ ಪರಿಹಾರಕ್ಕಾಗಿ ಮೋದಿ ಸ್ಥಾಪಿಸಿದ ‘ಪಿಎಂ ಕೇರ್ಸ್’ ನಿಧಿಗೆ ಅಪ್ಪ ಅಮ್ಮನೆ ಇಲ್ಲವಂತೆ. ಹಾಗಾದರೆ ಪ್ರಧಾನಿ ಮೋದಿ ಕೊರೊನಾ ಹೆಸರಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದಾರಾ? ಅಥವಾ ಕೊರೊನಾ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ದುಡ್ಡನ್ನು ಮನೆ ಖರ್ಚಿಗೆ ಬಳಸಿಕೊಳ್ಳುತ್ತಿದ್ದಾರಾ? ಉತ್ತರಿಸಿ ಬಿಜೆಪಿ ನಾಯಕರೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಅಲ್ಲದೇ, “ಒಂದು ಕಡೆ ಬಿಜೆಪಿ ಸಂಸದ ಮಾನ್ಯ ಅನಂತ್ ಕುಮಾರ್ ಹೆಗಡೆಯವರು ‘ಕೊರೊನಾ’ ಎನ್ನುವುದು ಠುಸ್ ಪಟಾಕಿ ಎನ್ನುತ್ತಾರೆ. ಮತ್ತೊಂದು ಕಡೆ ಮಾಸ್ಕ್ ಹಾಕಿದವರೆಲ್ಲರಿಗೂ ಆಂಜನೇಯನ ರೂಪಕ ಕೊಟ್ಟು ‘ಕಪಿ’ ಗಳ ರೀತಿ ಕಾಣಿಸುತ್ತಾರೆ ಎಂದು ಅಪಹಾಸ್ಯ ಮಾಡಿದ್ದಾರೆ. ವಿಷಯ ಹೀಗಿರುವಾಗ ಪ್ರಧಾನಿ ಮೋದಿ ಕೊರೊನಾ ಹೆಸರಲ್ಲಿ ‘ಪಿಎಂ ಕೇರ್ಸ್’ ಸ್ಥಾಪಿಸಿ ದುಡ್ಡು ಸಂಗ್ರಹಿಸುತ್ತಿರುವುದು ಯಾರ ಉದ್ದಾರಕ್ಕೆ? ಎಂದಿದ್ದಾರೆ.
ಕೊರೊನಾ ಠುಸ್ ಪಟಾಕಿ ಎನ್ನುವುದಾದರೆ. ಕೊರೊನಾ ಹೆಸರಲ್ಲಿ ಸಂಗ್ರಹಿಸಿದ್ದ ದುಡ್ಡು ಯಾರ ಖಜಾನೆಗೆ ಎಂದು ತಿಳಿಸಲಿ ಎಂದು ಕೇಂದ್ರದ ವಿರುದ್ಧ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.