ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಬರುವ ಹಿನ್ನೆಲೆಯಲ್ಲಿ#GOBackModi ಹ್ಯಾಷ್ ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿತ್ತು. ಇದೀಗ ಬಹುಭಾಷಾ ನಟಿ ಒವಿಯಾ ಕೂಡಾ ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ತಮಿಳು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಒವಿಯಾ#GOBackModi ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ತಮಿಳುನಾಡಿನ ಬಿಜೆಪಿ ಕಾನೂನು ವಿಭಾಗದ ಸದಸ್ಯ ಅಲೆಕ್ಸೆಸ್ ಸುಧಾಕರ್ ನಟಿ ಮಣಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.
Advertisement
ದೂರು ನೀಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಸರಿ ಪಡೆ ಓವಿಯಾಗೆ ಕ್ಷಮೆ ಕೇಳುವಂತೆ ಹೇಳಿದೆ. ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ ಅಲೆಕ್ಸಿಸ್ ಸುಧಾಕರ್ ಅವರು ಎಸ್ಪಿ, ಸಿಬಿ-ಸಿಐಡಿಗೆ ದೂರು ನೀಡಿದ್ದು, ಸಾರ್ವಜನಿಕವಾಗಿ ಅಗೌರವ ತೋರಿದ್ದಕ್ಕಾಗಿ ಓವಿಯಾ ವಿರುದ್ಧ ಕ್ರಮ ಕೈಗೊಳ್ಳಿ ಮತ್ತು ನಟಿಯ ಈ ಹಿಂದಿನ ಉದ್ದೇಶದ ಕುರಿತು ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Advertisement
— Oviyaa (@OviyaaSweetz) February 13, 2021
Advertisement
ಓವಿಯಾ ಟ್ವೀಟ್ನಿಂದ ಏನಾಯ್ತು?
ಓವಿಯಾ ಅವರ ಟ್ವೀಟ್ನಿಂದ ಅನೇಕರು ಗುಂಪು ಸೃಷ್ಟಿ ಮಾಡಿದ್ದಾರೆ, ಸಾರ್ವಜನಿಕವಾಗಿ ಕಲಹ ಉಂಟಾಗಿದೆ. 19 ಸಾವಿರಕ್ಕೂ ಅಧಿಕ ಮಂದಿ ಈ ಟ್ವೀಟ್ನ್ನು ರೀಟ್ವೀಟ್ ಮಾಡಿದ್ದಾರೆ. 59 ಸಾವಿರಕ್ಕೂ ಅಧಿಕ ಲೈಕ್ಸ್ ಓವಿಯಾ ಟ್ವೀಟ್ಗೆ ಬಂದಿದೆ. ಈ ನಟಿಗೆ ವಿದೇಶಗಳಿಗೆ ಯಾವುದಾದರೂ ಲಿಂಕ್ ಇದೆಯಾ ಎಂಬುದನ್ನು ಪತ್ತೆ ಹಚ್ಚಿ ಎಂದು ಒತ್ತಾಯಿಸಿದ್ದಾರೆ.
Advertisement