ಭೋಪಾಲ್: ಐದು ವರ್ಷದ ಮೊಮ್ಮಗಳ ಮಾತಿನಿಂದ ಮನನೊಂದ ಅಜ್ಜಿ, ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಆಸಿಡ್ ಕುಡಿದ ವೃದ್ಧೆಯನ್ನು ಮೀರಾ ಬಾಯಿ (75) ಎಂದು ಗುರುತಿಸಲಾಗಿದೆ. ಆ್ಯಸಿಡ್ ಸೇವನೆಗೆ ಕಾರಣ ಕೇಳಿದರೆ ಆಶ್ಚರ್ಯವಾಗಬಹುದು. ಐದು ವರ್ಷದ ಮೊಮ್ಮಗಳು ಎಲ್ಲಾ ಸೀಬೆ ಹಣ್ಣನ್ನು ನೀವು ತಿಂದಿದ್ದೀರಿ ಎಂದು ಹೇಳಿದ್ದಕ್ಕೆ ಅಜ್ಜಿ ಆ್ಯಸಿಡ್ ಕುಡಿದಿದ್ದಾಳೆ.
Advertisement
Advertisement
ಮೃತ ವೃದ್ಧೆಯ ಮಗ ಕೈಲಾಶ್ ಹೇಳುವ ಪ್ರಕಾರ ನನ್ನ ಮಗಳು ಅಜ್ಜಿಯೊಂದಿಗೆ ಕುಳಿತಿದ್ದಳು. ಆ ಸಮಯದಲ್ಲಿ ನೀವು ಎಲ್ಲಾ ಸೀಬೆ ಹಣ್ಣನ್ನು ತಿಂದಿದ್ದೀರಿ ಎಂದು ಮಗಳು ಹೇಳಿದಳು. ಹೀಗೆ ಹೇಳಿದ್ದಕ್ಕೆ ನನ್ನ ತಾಯಿಗೆ ಕೋಪ ಬಂದಿದೆ.
Advertisement
Advertisement
ನಾನು ತಿಂದಿಲ್ಲ ನೀವು ನನ್ನನ್ನು ಕೆಣಕುತ್ತಿದ್ದೀರಿ ಎಂದು ಹೇಳುತ್ತಾ ಆ್ಯಸಿಡ್ ಕುಡಿದರು. ನಂತರ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಯಸ್ಸಾದ ಅಜ್ಜಿ ಮೊಮ್ಮಗಳು ಹೇಳಿದ ಸಣ್ಣ ವಿಷಯಕ್ಕಾಗಿ ಆ್ಯಸಿಡ್ ಕುಡಿದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಮಾಡುತ್ತೇವೆ ಎಂದು ಬೆಟ್ಮಾ ಪೊಲೀಸರು ಹೇಳಿದ್ದಾರೆ.