ಪುಣೆ: ತಾನು ಆಡಿದ ಮೊದಲ ಪಂದ್ಯದಲ್ಲೇ ಕೃನಾಲ್ ಪಾಂಡ್ಯ ವಿಶ್ವದಾಖಲೆ ಬರೆದಿದ್ದಾರೆ. ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ಈ ಸಾಧನೆ ನಿರ್ಮಿಸಿದ್ದಾರೆ.
ಇಂದು ಕೃನಾಲ್ ಪಾಂಡ್ಯ 26 ಎಸೆತದಲ್ಲಿ 50 ರನ್ ಹೊಡೆದರು. ಟಾಮ್ ಕರ್ರನ್ ಎಸೆದ ಎಸೆತದಲ್ಲಿ ಒಂದು ಸಿಂಗಲ್ ರನ್ ಓಡಿ ವಿಶ್ವದಾಖಲೆ ನಿರ್ಮಿಸಿದರು.
Advertisement
Advertisement
ಇದಕ್ಕೂ ಮೊದಲು ಈ ದಾಖಲೆ ನ್ಯೂಜಿಲೆಂಡ್ ಆಟಗಾರ ಜಾನ್ ಮೋರಿಸ್ ಹೆಸರಿನಲ್ಲಿತ್ತು. 1990ರಲ್ಲಿ ಮೋರಿಸ್ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ 36 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದರು.
Advertisement
ಕೃನಾಲ್ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ರಾಹುಲ್ಗೆ ಜೊತೆಯಾದ ಕೃನಾಲ್ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್ಗಳನ್ನು ಚಚ್ಚಲು ಆರಂಭಿಸಿದರು. ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್ಗಳ ಗಡಿಯನ್ನು ದಾಟಿಸಿದರು.
Advertisement
ಕೃನಾಲ್ ಪಾಂಡ್ಯ 58 ರನ್(31 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದರೆ ರಾಹುಲ್ 62 ರನ್(43 ಎಸೆತ, 4 ಬೌಂಡರಿ, 4 ಸಿಕ್ಸರ್) ಹೊಡೆದರು.
ವೇಗದ ಅರ್ಧಶತಕವನ್ನು ಜನವರಿಯಲ್ಲಿ ಮೃತರಾದ ತಂದೆಗೆ ಅರ್ಪಿಸುವುದಾಗಿ ಕೃನಾಲ್ ಹೇಳಿದರು.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಮತ್ತು ಪ್ರಸಿದ್ಧ್ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್ ಪಾಂಡ್ಯ ಅವರು ಕೃನಾಲ್ಗೆ ಟೀಂ ಇಂಡಿಯಾದ ಕ್ಯಾಪ್ ನೀಡಿದರು.
ಭಾರತದ ರನ್ ಏರಿದ್ದು ಹೇಗೆ?
50 ರನ್ – 77 ಎಸೆತ
100 ರನ್ – 139 ಎಸೆತ
150 ರನ್ – 172 ಎಸೆತ
200 ರನ್ – 238 ಎಸೆತ
250 ರನ್ – 278 ಎಸೆತ
300 ರನ್ – 294 ಎಸೆತ
317 ರನ್ – 300 ಎಸೆತ
Century stand ✅
Half centuries for @klrahul11 & @krunalpandya24 ✅
300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBz
— BCCI (@BCCI) March 23, 2021