ನವದೆಹಲಿ: ಪೃಥ್ವಿ ಶಾ ಅವರ ಸ್ಫೋಟಕ ಅರ್ಧಶತಕದಿಂದ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Advertisement
ಗೆಲ್ಲಲು 155 ರನ್ಗಳ ಸವಾಲನ್ನು ಪಡೆದ ಡೆಲ್ಲಿ ತಂಡ 16.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು. ಈ ಮೂಲಕ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿ ಬೆಂಗಳೂರು ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿತು.
Advertisement
Advertisement
ಮೊದಲ ಓವರಿಗೆ 25 ರನ್: ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಪೃಥ್ವಿ ಶಾ ಶಿವಂ ಮಾವಿ ಎಸೆದ ಮೊದಲ ಓವರಿನಲ್ಲಿ 6 ಬೌಂಡರಿ ಹೊಡೆದರು. ಮೊದಲ ಬಾಲ್ ವೈಡ್ ಆಗಿದ್ದ ಕಾರಣ ಈ ಓವರಿನಲ್ಲಿ 25 ರನ್ ಬಂದಿತ್ತು.
Advertisement
ಶಿಖರ್ ಧವನ್ ಮತ್ತು ಪೃಥ್ವಿ ಶಾ ಮೊದಲ ವಿಕೆಟಿಗೆ 87 ಎಸೆತಗಳಲ್ಲಿ 132 ರನ್ ಜೊತೆಯಾಟವಾಡಿ ಕೋಲ್ಕತ್ತಾದಿಂದ ಪಂದ್ಯವನ್ನು ಕಸಿದಿದ್ದರು. ಶಿಖರ್ ಧವನ್ 46 ರನ್(47 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಪೃಥ್ವಿ ಶಾ 18 ಎಸೆತಗಳಲ್ಲಿ ಅರ್ಧಶತಕ ಹೊಡೆದು 82 ರನ್(41 ಎಸೆತ, 11 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ರಿಷಭ್ ಪಂತ್ 16 ರನ್(8 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ವಿಕೆಟ್ ಒಪ್ಪಿಸಿದರು.
ಆಂಡ್ರೆ ರೆಸೆಲ್ ಆರ್ಭಟ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಪರ ನಿತೀಶ್ ರಾಣಾ 15 ರನ್ (12 ಎಸೆತ, 1 ಬೌಂಡರಿ, 1 ಸಿಕ್ಸ್) ಶುಭಮನ್ ಗಿಲ್ 43ರನ್(38 ಎಸೆತ, 4 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ಪರ ಯಾವೊಬ್ಬ ಬ್ಯಾಟ್ಸ್ಮ್ಯಾನ್ ಕೂಡ ಅಬ್ಬರಿಸಲಿಲ್ಲ. ಕೊನೆಗೆ ಬಿಗ್ಹಿಟ್ಟರ್ ಆಂಡ್ರೆ ರೆಸೆಲ್ 45ರನ್ (27 ಎಸೆತ, 2 ಬೌಂಡರಿ, 4 ಸಿಕ್ಸರ್) ಬಾರಿಸಿ ಅಜೇಯರಾಗಿ ಉಳಿದು ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಕೋಲ್ಕತ್ತಾ 6 ವಿಕೆಟ್ ಕಳೆದುಕೊಂಡು 154ರನ್ ಗಳಿಸಿತು.
ಡೆಲ್ಲಿ ಪರ ಬೌಲಿಂಗ್ನಲ್ಲಿ ಮಿಂಚಿದ ಲಲಿತ್ ಯಾದವ್ 3 ಓವರ್ ಎಸೆದು 13 ರನ್ ನೀಡಿ 3 ವಿಕೆಟ್ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಕಿತ್ತರು. ಆವೇಶ್ ಖಾನ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಲಾ 1 ವಿಕೆಟ್ ಪಡೆದರು.