ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯ ಭೀತಿಯ ಬೆನ್ನಲ್ಲೇ ರಾಜ್ಯದಲ್ಲಿ ಡೆಲ್ಟಾ ಪ್ಲಸ್ (Delta Plus) ವೈರಸ್ ಆತಂಕ ಎದುರಾಗಿದೆ. ಮೈಸೈರಿನಲ್ಲಿ ಒಂದು ಡೆಲ್ಟಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಆ ರೋಗಿಯನ್ನು ಐಸೋಲೇಟ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಲ್ಟಾ ಪ್ಲಸ್ ಕೇಸ್ ಮಹಾರಾಷ್ಟ್ರದಲ್ಲಿ 20-30 ಕೇಸ್ ಬಂದಿದೆ. ಮೈಸೂರಿನಲ್ಲಿ ಒಂದು ಕೇಸ್ ಬಂದಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಅಲ್ಲದೆ ಅವರಿಂದ ಯಾರಿಗೂ ಸೋಂಕು ಹರಡಿಲ್ಲ. ಆತನ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕದಲ್ಲಿ ಇರೋರಿಗೆ ಸೋಂಕು ಹರಡಿಲ್ಲ. ಈ ವೈರಸ್ ಬಗ್ಗೆ ನಿರಂತರವಾಗಿ ಎಚ್ಚರವಹಿಸಿದ್ದೇವೆ. 6 ಜಿನೋಮ್ ಲ್ಯಾಬ್ ಕೂಡಾ ಪ್ರಾರಂಭ ಮಾಡಲು ತೀರ್ಮಾನ ಮಾಡಲಾಗಿದೆ. ನಾನ್ ಕೋವಿಡ್ ರೋಗಿಗಳಿಗೂ ಇನ್ನು ಮುಂದೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದೇವೆ ಎಂದರು.
Advertisement
Advertisement
ಡಾ.ದೇವಿಶೆಟ್ಟಿ ನಿನ್ನೆ ಪ್ರಾಥಮಿಕ ವರದಿ ನೀಡಿದೆ. ನಮ್ಮ ಕಮಿಟಿ ಜೊತೆ ಚರ್ಚೆ ಮಾಡಿ ಶಿಫಾರಸು ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. 45 ದಿನಗಳ ಒಳಗೆ ಎಲ್ಲಾ ಜಿಲ್ಲೆಗಳಿಗೆ ತಜ್ಞರ ಶಿಫಾರಸು ಅನುಷ್ಠಾನ ಮಾಡ್ತೀವಿ. ಡೆಲ್ಟಾ ಪ್ಲಸ್ ವೈರಸ್ ಗೆ ಚಿಕಿತ್ಸೆ ದೊಡ್ಡ ಬದಲಾವಣೆ ಇಲ್ಲ. ಡೆಲ್ಟಾ ವೈರಸ್ ಗೆ ನೀಡುವ ಚಿಕಿತ್ಸೆ ಜೊತೆ ಕೆಲ ಔಷಧಿಗಳನ್ನ ಹೆಚ್ಚುವರಿಯಾಗಿ ನೀಡಲಾಗ್ತಿದೆ. ಡೆಲ್ಟಾ ಪ್ಲಸ್ ಸ್ವಭಾವ ಕೂಡಾ ಡೆಲ್ಟಾ ಸ್ವಭಾವವೇ ಇದೆ. ಕೆಲ ಔಷಧಿ ಮಾತ್ರ ಬದಲಾವಣೆ ಮಾಡಲಾಗ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೆರೆಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆ – ಸರ್ಕಾರಕ್ಕೆ ತಜ್ಞರ ಎಚ್ಚರಿಕೆ
Advertisement
ಪ್ರತಿ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ಕೇಸ್ ಬಗ್ಗೆ ಟೆಸ್ಟ್ ಗೆ ಕಳಿಸಲಾಗ್ತಿದೆ. ಶೇ.5 ಪ್ರತಿ ಜಿಲ್ಲೆಯಲ್ಲಿ ರಾಂಡಮ್ ಟೆಸ್ಟ್ ಗೆ ಕಳಿಸಲು ನಿರ್ಧಾರ ಮಾಡಲಾಗಿದೆ. ಅನುಮಾನ ಇರೋ ಕಡೆ ಹೆಚ್ಚು ಟೆಸ್ಟ್ ಗೆ ಕಳಿಸುವುದಾಗಿ ಹೇಳಿದರು.