ಮಂಡ್ಯ: ರಾಜ್ಯ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ನೀಡಿ ವ್ಯರ್ಥ ಮಾಡುತ್ತಿದೆ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಮೈಶುಗರ್ ಕಾರ್ಖಾನೆ. ಕಾರ್ಖಾನೆ ಆರಂಭಿಸಲು ಕೇವಲ 14 ಕೋಟಿ ರೂಪಾಯಿ ಕೊಡಲು ಸಾಧ್ಯವಾಗಲಿಲ್ಲ ಎಂದು ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮೈಶುಗರ್ ಆಸ್ತಿ ಪಾರಂಪರಿಕವಾದುದು, ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಆಗಿದೆ. ಆದರೆ ಮೈಶುಗರ್ ಕಾರ್ಖಾನೆಯನ್ನು 40 ವರ್ಷಕ್ಕೆ ಗುತ್ತಿಗೆ ನೀಡಿ ಮಾರಾಟ ಮಾಡಲು ನಿಂತಿರುವ ಸರ್ಕಾರದ ಕ್ರಮ ಸರಿ ಇಲ್ಲ. ಬಳ್ಳಾರಿ ಜಿಂದಾಲ್ ಫ್ಯಾಕ್ಟರಿಯನ್ನು ಮಾರಾಟ ಮಾಡಲು ಹೋಗಿ ರೈತರು ಮತ್ತು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿ ಮಾರಾಟದ ವಿಷಯ ಕೈಬಿಟ್ಟರು. ಆದರೆ ಮೈಶುಗರ್ ಮಾರಾಟ ಮಾಡಲು ಮುಂದಾದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
Advertisement
ಮೈಸೂರು ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಕಬ್ಬನ್ನು ಜಿಲ್ಲೆಯ ಇತರೆ ಕಾರ್ಖಾನೆಳಿಗೆ ಹಾಗೂ ಹೊರ ಜಿಲ್ಲೆಯ ಕಾರ್ಖಾನಗಳಿಗೆ ಸಾಗಣಿಕೆ ಮಾಡುತ್ತಿರುವುದರಿಂದ ಮಂಡ್ಯ ಸಕ್ಕರೆ ಕಂಪನಿಗೆ ತೆಗೆದುಕೊಳ್ಳುವಷ್ಟೇ ಸಾಗಾಣಿಕೆ ವೆಚ್ಚವನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಸಾಕಾಣಿಕೆ ವೆಚ್ಚವನ್ನು ಆಯಾಯ ಕಾರ್ಖಾನೆಯವರೇ ಭರಸಿಕೊಳ್ಳಬೇಕು. ಇದರ ಹೊರೆಯನ್ನು ಕಬ್ಬು ಬೆಳೆಗಾರರಿಗೆ ಹೊರೆಸಬಾರದು. ಇದಕ್ಕೆ ಸರ್ಕಾರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
Advertisement