ನವದೆಹಲಿ: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 500 ಹಾಸಿಗೆ ಕೋವಿಡ್ ಸೆಂಟರ್ ತೆರೆಯಲು ತೀರ್ಮಾನ ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೆಲಸ ಭರದಿಂದ ಸಾಗುತ್ತಿದೆ.
ರಾಮಲೀಲಾ ಮೈದಾನದುದ್ದಕ್ಕೂ ದೊಡ್ಡ ದೊಡ್ಡ ಶೆಡ್ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಳವಾಗ್ತಿರೋದು ದೆಹಲಿ ಸರ್ಕಾರಕ್ಕೆ ತಲೆ ಬಿಸಿ ತಂದಿದೆ. ಹೀಗಾಗಿ ಎಲ್ಲಾ ಮುಂಜಾಗೃತಾ ಕ್ರಮಗಳಿಗೆ ದೆಹಲಿ ಸರ್ಕಾರ ಮುಂದಾಗಿದೆ.
Advertisement
An extended facility of GTB Hospital with 500 ICU beds is being made at Ramlila Maidaan.
Hon’ble CM @ArvindKejriwal ji visited the ground to review the progress. The site will be ready by 5th may. pic.twitter.com/SQX6hKbN1m
— Satyendar Jain (@SatyendarJain) April 27, 2021
Advertisement
ಮೇ ತಿಂಗಳಲ್ಲಿ ಈ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಮೇ 5ರ ಬಳಗಾಗಿ ಈ ಕೋವಿಡ್ ಸೆಂಟರ್ ಬಳಕೆಗೆ ಸಿದ್ದವಿರಲಿದೆ. ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದಲ್ಲಿ 500 ಐಸಿಯು ಹಾಸಿಗೆಗಳ್ಳುಳ್ಳ ಕೊರೊನಾ ಸೆಂಟರ್ ಆರಂಭಕ್ಕೆ ಸಿದ್ಧತೆ ನಡೆದಿದೆ.