ನವದೆಹಲಿ: ಮತ್ತೆ ಮೈಕ್ರೋಮ್ಯಾಕ್ಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದು, ಇನ್ ಸೀರಿಸ್ನಲ್ಲಿ ಎರಡು ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮೈಕ್ರೋಮ್ಯಾಕ್ಸ್ ಇನ್ 1ಬಿ ಮತ್ತು ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಿದೆ. ಎರಡು ಫೋನುಗಳು ಸ್ಟಾಕ್ ಆಂಡ್ರಾಯ್ಡ್ ನೊಂದಿಗೆ ಬಿಡುಗಡೆಯಾಗಿದೆ. ಹೀಗಾಗಿ ಆಂಡ್ರಾಯ್ಡ್ ಅಪ್ಡೇಟ್ ಬೇಗನೇ ಸಿಗಲಿದೆ. ಅಷ್ಟೇ ಅಲ್ಲದೇ ಬ್ಲೋಟ್ವೇರ್ ಅಥವಾ ಯೂಸರ್ ಇಂಟರ್ ಫೇಸ್ ಆಧಾರಿತ ಯಾವುದೇ ಅಪ್ಲಿಕೇಶನ್ಗಳನ್ನು ಈ ಫೋನಿಗೆ ನೀಡಿಲ್ಲ. ಸಾಧಾರಣವಾಗಿ ಕಡಿಮೆ ಬೆಲೆಯ ಫೋನಿನಲ್ಲಿ ಗ್ರಾಹಕರು ಬಳಕೆ ಮಾಡದೇ ಇರುವ ಆಪ್ಗಳು ಪ್ಲಿ ಲೋಡೆಡ್ ಆಗಿ ಇನ್ಸ್ಟಾಲ್ ಆಗಿರುತ್ತದೆ. ಆದರೆ ಈ ಫೋನಿನಲ್ಲಿ ಅನಗತ್ಯವಾಗಿರುವ ಬ್ಲೋಟ್ವೇರ್ ಆಪ್ಗಳು ಇಲ್ಲ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ.
Advertisement
Advertisement
ಬೆಲೆ ಎಷ್ಟು?
ಮೈಕ್ರೋಮ್ಯಾಕ್ಸ್ ಇನ್ 1ಬಿ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದೆ. 2ಜಿಬಿ ರಾಮ್+ 32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 6,999 ರೂ. ದರವನ್ನು ನಿಗದಿ ಮಾಡಿದೆ. 4ಜಿಬಿ ರಾಮ್+ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 7,999 ರೂ. ದರವನ್ನು ನಿಗದಿ ಮಾಡಿದೆ.
Advertisement
ಇನ್ ನೋಟ್ 1 ಫೋನ್ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದೆ. 4ಜಿಬಿ ರಾಮ್ + 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 10,999 ರೂ., 4 ಜಿಬಿ ರಾಮ್ + 128 ಜಿಬಿ ಆಂತರಿಕ ಮಮೊರಿಯ ಫೋನಿಗೆ 12,999 ರೂ. ದರ ನಿಗದಿಯಾಗಿದೆ. ನ.24 ರ ನಂತರ ಮೈಕ್ರೋಮ್ಯಾಕ್ಸ್ ಅಥವಾ ಪ್ಲಿಪ್ಕಾರ್ಟ್ ವೆಬ್ಸೈಟಿಗೆ ಭೇಟಿ ನೀಡಿ ಫೋನ್ ಬುಕ್ ಮಾಡಬಹುದಾಗಿದೆ.
Advertisement
ಇನ್ 1ಬಿ ಗುಣವೈಶಿಷ್ಟ್ಯಗಳು
6.52 ಇಂಚಿನ ಎಲ್ಸಿಡಿ ಸ್ಕ್ರೀನ್(720*1560 ಪಿಕ್ಸೆಲ್, 264 ಪಿಪಿಐ), ಮೀಡಿಯಾ ಟೆಕ್ ಹೆಲಿಯೋ ಜಿ35 ಅಕ್ಟಾಕೋರ್ ಪ್ರೊಸೆಸರ್, ಪವರ್ ವಿಆರ್ ಜಿಇ8320 ಗ್ರಾಫಿಕ್ಸ್ ಪ್ರೊಸೆಸರ್ ನೀಡಲಾಗಿದೆ. 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ವನ್ನು ಹೊಂದಿದೆ.
ಹಿಂದುಗಡೆ 13 ಎಂಪಿ (ವೈಡ್) ಕ್ಯಾಮೆರಾ, 2 ಎಂಪಿ (ಡೆಪ್ತ್) ಕ್ಯಾಮೆರಾ ಮುಂದುಗಡೆ 8 ಎಂಪಿ ಸಿಂಗಲ್ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್ ಇಲ್ಲ. 5000 ಎಂಎಎಚ್ ಬ್ಯಾಟರಿ ಹೊಂದಿದೆ.
ಇನ್ ನೋಟ್ 1 ಗುಣವೈಶಿಷ್ಟ್ಯಗಳು
6.67 ಇಂಚಿನ ಐಪಿಎಲ್ ಎಲ್ಸಿಡಿ ಸ್ಕ್ರೀನ್(1080*2400 ಪಿಕ್ಸೆಲ್, 395 ಪಿಪಿಐ), ಆಂಡ್ರಾಯ್ಡ್ 10, ಮೀಡಿಯಾ ಟೆಕ್ ಹೆಲಿಯೋ ಜಿ35 ಅಕ್ಟಾಕೋರ್ ಪ್ರೊಸೆಸರ್,ಮಾಲಿಜಿ52 ಎಂಸಿ2 ಗ್ರಾಫಿಕ್ಸ್ ಪ್ರೊಸೆಸರ್ 64 ಹೊಂದಿದೆ.
48 ಎಂಪಿ (ವೈಡ್), 5 ಎಂಪಿ (ಅಲ್ಟ್ರಾ ವೈಡ್), 2 ಎಂಪಿ (ಮ್ಯಾಕ್ರೋ), 2 ಎಂಪಿ(ಡೆಪ್ತ್) ಕ್ಯಾಮೆರಾ ಹೊಂದಿದೆ. ಮುಂದುಗಡೆ 16 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, 5000 ಎಂಎಎಚ್ ಬ್ಯಾಟರಿ ಹೊಂದಿದೆ.