ರಾಂಚಿ: ಮೇವು ಹಗರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾ ದಳದ ನಾಯಕ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
Advertisement
ಲಾಲೂ ಯಾದವ್ ಅವರು ಡುಮ್ಕಾ ಖಜಾನೆ ಪ್ರಕರಣ ಎಂದು ಕರೆಯಲ್ಪಡುವ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಇದರೊಂದಿಗೆ ಮೇವು ಪ್ರಕರಣ ಸಂಬಂಧಿಸಿದಂತೆ ನಾಲ್ಕೈದು ಪ್ರಕರಣಗಳು ಇವರ ಮೇಲಿದೆ. ಹಾಗೆ ಜಾರ್ಖಂಡ್ ನಗರದ ಖಜಾನೆಯಿಂದ 3.13 ಕೋಟಿ ರೂ. ಅಕ್ರಮವಾಗಿ ಬಳಸಿಕೊಂಡಿದ್ದರು ಎಂಬ ಆರೋಪವು ಇವರ ಮೇಲಿದೆ. ಲಾಲೂ ಅವರು ಮೇವು ಪ್ರಕರಣದ ಮೂರು ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದಿದ್ದರು. ಇದೀಗ ನಾಲ್ಕನೇ ಪ್ರಕರಣದಲ್ಲೂ ಜಾಮೀನು ಸಿಕ್ಕಿದೆ.
Advertisement
Jharkhand High Court grants bail to RJD leader Lalu Prasad Yadav in Fodder scam case related to fraudulent withdrawal from Dumka Treasury
(file photo) pic.twitter.com/K82jvBYR1m
— ANI (@ANI) April 17, 2021
Advertisement
ಮೇವು ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ 2017ರ ಡಿಸೆಂಬರ್ ನಲ್ಲಿ ಜೈಲು ಸೇರಿದ್ದರು. ಬಳಿಕ ಆರೋಗ್ಯದಲ್ಲಿ ಉಂಟಾದ ಸಮಸ್ಯೆಯಿಂದಾಗಿ ಜಾರ್ಖಂಡ್ ಜೈಲಿನಲ್ಲಿದ್ದ ಲಾಲೂ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಗಿತ್ತು. ನಂತರ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದೆ ಚಿಕಿತ್ಸೆಯ ಬಳಿಕ ಜಾಮೀನು ಸಿಕ್ಕಿರುವುದರಿಂದಾಗಿ ಮನೆಗೆ ತೆರಳಬಹುದಾಗಿದೆ.
Advertisement