ಇಸ್ಲಾಮ್ಬಾದ್: ಮೂಕಪ್ರಾಣಿ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಐವರು ಮೇಕೆಯನ್ನು ಹತ್ತಿರದ ಕಾಂಪೌಂಡ್ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ, ಕಿರುಕುಳ ನೀಡಿ ಕೊನೆಗೆ ಹತ್ಯೆ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದ ಒಕ್ರಾದಲ್ಲಿ ನಡೆದಿದ್ದು, ಹೀನ ಕೃತ್ಯದ ಬಳಿಕ ಕಾಮುಕರು ಪರಾರಿಯಾದದ್ದನ್ನು ಸ್ಥಳೀಯರು ನೋಡಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಕ್ನಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವ ಕುರಿತಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ನನ್ನು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು
Advertisement
Advertisement
ಪಾಕಿಸ್ತಾನದ ನಟಿ ಮಥಿರಾ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಾಣಿಗಳು ಸಹ ಬುರ್ಕಾ ಧರಿಸುವ ಅಗತ್ಯವಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದಿದ್ದಾರೆ. ಇದನ್ನೂ ಓದಿ: ಚಿರತೆ ದತ್ತು ಪಡೆದ ಬಿಗ್ಬಾಸ್ ಸ್ಪರ್ಧಿ
Advertisement
A goat died, after being raped by 5 boys at Okara.
Shame to all those who link rape to women’s clothings n not as a serious mental illness n brutality, caused by patriarchy. pic.twitter.com/JkQma5nhhI
— Ali Imran (@Malik_Ali_Imran) July 27, 2021
Advertisement
ಬೆತ್ತಲೆ ಪ್ರಾಣಿಗಳು ಪುರುಷರ ಮಲೆ ಪ್ರಭಾವ ಬೀರುತ್ತದೆಯೇ? ಇದೀಗ ನಮ್ಮ ಹ್ಯಾಂಡ್ಸಮ್ ಪ್ರಧಾನಿ ಸಹ ಸಂಪೂರ್ಣ ಮುಚ್ಚಿಕೊಳ್ಳುವಂತೆ ಮೇಕೆಗಳನ್ನು ಸಹ ಕೇಳುತ್ತಾರೆ. ಏಕೆಂದರೆ ಕೆಲ ಅಮಾಯಕರು ಅದರಿಂದ ಪ್ರಚೋದನೆಗೆ ಒಳಗಾಗಬಹುದು ಎಂದು ಟ್ವೀಟ್ ಮಾಡಿ ನೆಟ್ಟಿಗರು ಪ್ರಧಾನಿ ಹೇಳಿಕೆಗೆ ವ್ಯಂಗ್ಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ ದಿನಾಚರಣೆಯ ಭಾಷಣಕ್ಕೆ ಸಲಹೆ ನೀಡಿ: ಮೋದಿ
An FIR has been lodged in Okara for a gang rape and murder. Not of a woman, but a goat.
Five robots who were enraged to see a goat wander around without any decent clothes on. pic.twitter.com/RwWKyBHZYe
— Raza Gillani ☭ (@Raza_Shabina) July 26, 2021
ಹಿಂದೊಮ್ಮೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿರುವ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಹಿಳೆಯರು ಧರಿಸುವ ಉಡುಗೆಯೇ ಅತ್ಯಾಚಾರ ಕಾರಣ. ಪುರುಷರ ಮೇಲೆ ಪ್ರಭಾವ ಬೀಳುತ್ತದೆ. ಮಾನವರು ರೋಬೋಟ್ಗಳಲ್ಲ. ಬಟ್ಟೆ ಧರಿಸುವ ಸಾಮಾನ್ಯ ತಿಳುವಳಿಕೆ ತಿಳಿಯಿರಿ ಎಂದು ಹೇಳಿದ್ದರು. ಈ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿತ್ತು. ಇದೀಗ ಇದೇ ವಿಚಾರವನ್ನು ಇಟ್ಟುಕೊಂಡು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ.