ಪಣಜಿ: ಕೊರೊನಾ ನಿಯಂತ್ರಣಕ್ಕಾಗಿ ಗೋವಾ ಮೇ 3ರವರೆಗೆ ಲಾಕ್ಡೌನ್ ಆಗಲಿದೆ. ಮೇ 3ರ ಬೆಳಗ್ಗೆಯವರೆಗೆ ಗೋವಾ ಸಂಪೂರ್ಣ ಸ್ತಬ್ಧವಾಗಲಿದೆ.
ಅಗತ್ಯ ಸೇವೆ ಮತ್ತು ಕೈಗಾರಿಗಗೆ ಚಟುವಟಿಕೆಗಳಿಗೆ ಷರತ್ತು ಬದ್ಧ ಅನುಮತಿಯನ್ನ ಸರ್ಕಾರ ನೀಡಿದೆ. ಸಾರ್ವಜನಿಕ ಸಾರಿಗೆ ಸಂಪೂರ್ಣ ಬಂದ್ ಆಗಲಿದೆ. ಕ್ಯಾಸಿನೋ, ಹೋಟೆಲ್, ಪಬ್ ಕ್ಲೋಸ್ ಆಗಲಿವೆ. ಅಗತ್ಯಸೇವೆ ಮತ್ತು ಸರಕು ಸಾಗಾಟಕ್ಕೆ ಮಾತ್ರ ರಾಜ್ಯದ ಗಡಿ ತೆರೆಯಲಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
Advertisement
Advertisement
ಈಗಾಗಲೇ ಗೋವಾದಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಲ್ಕು ದಿನಗಳ ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ. ನಿಗದಿಯಾಗಿರುವ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಅವಕಾಶವಿದ್ದು, 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಇತ್ತ ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಸ್ಥಳೀಯ ಪಂಚಾಯ್ತಿಗಳು ಪ್ರವಾಸಿ ಸ್ಥಾನಗಳಲ್ಲಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಪ್ರಕಟಿಸಿವೆ.