ಹೈದರಾಬಾದ್: ಮೂಗಿನ ಮೂಲಕ ಲಸಿಕೆಯ (ಇಂಟ್ರಾನಾಸಲ್ ವ್ಯಾಕ್ಸಿನ್) ಮೊದಲ ಕ್ಲಿನಿಕಲ್ ಪ್ರಯೋಗ ಆರಂಭಗೊಂಡಿದ್ದು 10 ಮಂದಿ ಭಾರತ್ ಬಯೋಟೆಕ್ ಕಂಪನಿಯ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಬುಧವಾರ 10 ಮಂದಿ ಲಸಿಕೆ ತೆಗೆದುಕೊಂಡಿದ್ದು, ಶೀಘ್ರವೇ ಪಾಟ್ನಾ, ಚೆನ್ನೈ ಮತ್ತು ನಾಗ್ಪುರದಲ್ಲಿ ಲಸಿಕೆಯ ಪ್ರಯೋಗ ನಡೆಯಲಿದೆ. ಮೊದಲ ಹಂತದಲ್ಲಿ ದೇಶದಲ್ಲಿ 175 ಮಂದಿ ಈ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ.
Advertisement
Advertisement
ಕಳೆದ ಶುಕ್ರವಾರ ಹೈದರಾಬಾದ್ನಲ್ಲಿ ಕ್ಲಿನಿಕಲ್ ಪ್ರಯೋಗ ಆರಂಭಗೊಂಡಿದ್ದು ಮೊದಲ ದಿನ ಇಬ್ಬರು ಲಸಿಕೆಯನ್ನು ಪಡೆದುಕೊಂಡಿದ್ದರು.
Advertisement
ಇಂಟ್ರಾನಾಸಲ್ ವ್ಯಾಕ್ಸಿನ್ ಪ್ರಯೋಗ ಯಶಸ್ವಿಯಾದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಗೇಮ್ ಚೇಂಜರ್ ಆಗಲಿದೆ. ಬಹುತೇಕ ಲಸಿಕೆಗಳನ್ನು ಸ್ನಾಯುಗಳ ಮೂಲಕ ನೀಡಲಾಗುತ್ತದೆ. ಈಗ ನೀಡಲಾಗುತ್ತಿರುವ ಕೊರೊನಾ ಲಸಿಕೆಯನ್ನು ಸೂಜಿಯ ಮೂಲಕ ದೇಹಕ್ಕೆ ಕಳುಹಿಸಲಾಗುತ್ತದೆ. ಆದರೆ ಈ ಲಸಿಕೆಯನ್ನು ಮೂಗಿನ ಹೊಳ್ಳೆಗಳ ಒಳಗಡೆ ಸಿಂಪಡಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಸೂಜಿಯ ಬಳಕೆಯ ಅಗತ್ಯವೇ ಇರುವುದಿಲ್ಲ.
Advertisement
ಭಾರತ್ ಬಯೋಟೆಕ್ ಕಂಪನಿಯ ಮುಖ್ಯಸ್ಥ ಡಾ. ಕೃಷ್ಣ ಎಲ್ಲಾ ಪ್ರತಿಕ್ರಿಯಿಸಿ, ಕಂಪನಿ ಅಮೆರಿಕದ ವೈದ್ಯಕೀಯ ವಿಶ್ವವಿದ್ಯಾಲಯದ ಜೊತೆ ಸೇರಿ ನಾಸಲ್ ವ್ಯಾಕ್ಸಿನ್ ಬಗ್ಗೆ ಕೆಲಸ ಮಾಡುತ್ತಿದೆ. ನಾಸಲ್ ವ್ಯಾಕ್ಸಿನ್ಗಳು ಉತ್ತಮ ಆಯ್ಕೆ ಎಂದು ಈಗಾಗಲೇ ಸಂಶೋಧನೆಗಳು ತಿಳಿಸಿವೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಮೂಗಿನ ಮೂಲಕ ದೇಹಕ್ಕೆ ಪ್ರವೇಶಿಸುತ್ತದೆ. ಮೂಗಿನ ಮೂಲಕ ಲಸಿಕೆ ನೀಡಿದರೆ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಬರುವುದರ ಜೊತೆಗೆ ಸೋಂಕು ಹರಡವುದನ್ನು ತಪ್ಪಿಸಬಹುದಾಗಿದೆ.
ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿ ಪಡಿಸಿದರುವ ಕೊವಾಕ್ಸಿನ್ ಲಸಿಕೆಯನ್ನು ದೇಶದಲ್ಲಿ ತರ್ತು ಬಳಕೆಗೆ ಅನುಮತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಲಸಿಕೆಯನ್ನು ಪಡೆದುಕೊಂಡಿದ್ದರು.