ತಿರುವನಂತಪುರಂ: ದೇವರನಾಡು ಕೇರಳದ ಮುಸ್ಲಿಂ ಯುವತಿ ಜಸ್ನಾ ಸಲೀಂ ಅವರ ಬಹುದಿನಗಳ ಕನಸು ಇಂದು ಈಡೇರಿದೆ.
ಕಳೆದ ಕೆಲ ವರ್ಷಗಳ ಹಿಂದೆ ಯುವತಿ ಜಸ್ನಾ ಅವರ ಹೆಸರು ಎಲ್ಲೆಡೆ ಕೇಳಿ ಬಂದಿತ್ತು. ಅದಕ್ಕೆ ಕಾರಣ ಅವರು ಬಿಡಿಸಿದ ವರ್ಣರಂಜಿತವಾದ ಚಿತ್ರಗಳಾಗಿವೆ. ದೇವರ ಭಾವಚಿತ್ರಗಳ ಪೆಂಟಿಂಗ್ ಈಕೆಗೆ ಅಚ್ಚುಮೆಚ್ಚು. ಕಳೆದ 6 ವರ್ಷಗಳಲ್ಲಿ ಸುಮಾರು 500ಕ್ಕೂ ಹೆಚ್ಚು ವಿವಿಧ ದೇವರ ಕಲಾಕೃತಿಗಳನ್ನು ಕುಂಚದಲ್ಲಿ ಅರಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ಒಬ್ಬ ದೊಡ್ಡ ಭಯೋತ್ಪಾದಕ: ಕಟೀಲ್
Advertisement
Advertisement
ತರಬೇತಿ ಪಡೆಯದೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುವ ಜಸ್ನಾ ಅವರಿಗೆ ಬಹುದಿನಗಳ ಆಸೆಯೊಂದಿತ್ತು. ಅದು ಇದೀಗ ಈಡೇರಿದೆ. ಇದುವರೆಗೆ ಅವರು ರಚಿಸಿದ ಚಿತ್ರಗಳನ್ನು ಹಿಂದೂ ದೇವರುಗಳ ಭಾವಚಿತ್ರಗಳೇ ಹೆಚ್ಚು. ತಾವು ಮಾಡಿದ ಕೃಷ್ಣನ ಪೆಂಟಿಂಗ್ನ್ನು ದೇವಸ್ಥಾನಕ್ಕೆ ನೀಡಬೇಕೆನ್ನುವುದು ಈಕೆಯ ಬಯಕೆಯಾಗಿತ್ತು. ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿ ಬಂದಿದ್ದು, ಭಾನಿವಾರ ಉಲನಾಡು ಗ್ರಾಮದ ಶ್ರೀಕೃಷ್ಣದೇವಸ್ಥಾನಕ್ಕೆ ತನ್ನ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಟಿಪ್ಪುವಿನ ವಂಶಸ್ಥರಾ?: ಕೆ.ಜಿ ಬೋಪಯ್ಯ
Advertisement
Advertisement
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಜಸ್ನಾ, ಶ್ರೀ ಕೃಷ್ಣನ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದು ಮತ್ತು ಆ ದೇವರ ಮುಂದೆ ನನ್ನ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿವುದು ನನ್ನ ದೊಡ್ಡ ಕನಸಾಗಿತ್ತು. ಪಂಡಲಂನ ಉಲನಾಡು ಶ್ರೀಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ನನ್ನ ಕನಸು ನನಸಾಗಿದ್ದಕ್ಕೆ ತುಂಬಾ ಸಂತೋಷವಾಯಿತ್ತು. ಈ ಸಂಭ್ರಮವನ್ನು ವ್ಯಕ್ತಪಡಿಸಲು ನನಗೆ ಪದಗಳು ಸಿಗುತ್ತಿಲ್ಲ. ಈ ದೇವಸ್ಥಾನದ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು ಎಂದು ಜಸ್ನಾ ಹೇಳಿದ್ದಾರೆ.