ಮಂಗಳೂರು: ಕೊರೊನಾ ಲಾಕ್ಡೌನ್ನಿಂದಾಗಿ ಮುಜರಾಯಿ ಇಲಾಖೆಯ ಒಟ್ಟು ಆದಾಯದಲ್ಲಿ ಶೇ.30 ರಿಂದ 35ರಷ್ಟು ಕಡಿಮೆ ಆಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಿಂದ ಪ್ರತಿವರ್ಷ ಅಂದಾಜು 600 ಕೋಟಿ ರೂ. ಆದಾಯ ಬರುತಿತ್ತು. ಆದ್ರೆ ಲಾಕ್ಡೌನ್ನಿಂದ ಒಟ್ಟು ಆದಾಯದ ಪ್ರಮಾಣವು ಕಡಿಮೆಯಾಗಿದೆ ಎಂದು ತಿಳಿಸಿದರು.
Advertisement
Advertisement
ಲಾಕ್ಡೌನ್ನಿಂದಾಗಿ ಮುಜರಾಯಿ ಇಲಾಖೆಯಿಂದ ನಡೆಯಬೇಕಿದ್ದ ಸಪ್ತಪದಿ ವಿವಾಹವೂ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ಅನುಷ್ಠಾನ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಸಪ್ತಪದಿಯನ್ನು ನಿಶ್ಚಯವಾಗಿ ನಮ್ಮ ಇಲಾಖೆ ಮಾಡುತ್ತೆ. ಯಾವ ರೀತಿ ಮಾಡಬೇಕು ಎಂದು ನಮ್ಮ ತಂಡ ಚಿಂತನೆ ನಡೆಸಿದೆ ಎಂದು ತಿಳಿಸಿದರು.