ಉಡುಪಿ: ಜಿಲ್ಲೆಯಲ್ಲಿ ಇಂದು ಐದು ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಮುಂಬೈನಿಂದ ಬಂದು ಕ್ವಾರಂಟೈನ್ ನಲ್ಲಿದ್ದ ನಾಲ್ವರಿಗೆ ಸೋಂಕು ತಗುಲಿರುವುದು ದೃಢ ಆಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನಲ್ಲಿ ನಾಲ್ವರೂ ಕ್ವಾರಂಟೈನ್ ಸೆಂಟರ್ ನಲ್ಲಿ ಇದ್ದ ಸಂದರ್ಭ ಲಕ್ಷಣ ಕಂಡು ಬಂದ ಕಾರಣ ತಕ್ಷಣ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಈ ಸಂದರ್ಭ ಸೋಂಕಿರುವುದು ದೃಢಪಟ್ಟಿದೆ.
Advertisement
Advertisement
ಸೋಂಕಿತರ ಪೈಕಿ 38 ವರ್ಷದ ವ್ಯಕ್ತಿ, ಮುಂಬೈನಲ್ಲಿ ಕೊರೊನಾ ಟೆಸ್ಟ್ ಮಾಡಿಸಿ ವರದಿ ಬರುವ ಮೊದಲೇ ಉಡುಪಿಗೆ ಬಂದಿದ್ದ. ಆತನಿಗೆ ಮುಂಬೈ ಮತ್ತು ಉಡುಪಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆತ ತನ್ನ ಅಣ್ಣನ ಮಗ 8 ವರ್ಷದ ಬಾಲಕನಿಗೆ ಸೋಂಕು ಅಂಟಿಸಿದ್ದಾನೆ. ನಾಲ್ವರ ಪೈಕಿ ಮಹಿಳೆ ಗರ್ಭಿಣಿ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಮಾಹಿತಿ ನೀಡಿದ್ದಾರೆ.
Advertisement
ಚಿತ್ರದುರ್ಗ ಮೂಲದ ಕ್ಯಾನ್ಸರ್ ಪೀಡಿತೆಗೆ ಕೊರೊನಾ ಸೋಂಕು ದೃಢ ಆಗಿದೆ. 17 ವರ್ಷದಾಕೆ ನಾಲ್ಕು ದಿನದ ಹಿಂದೆ ಮಣಿಪಾಲ ಕೆಎಂಸಿಗೆ ಚಿಕಿತ್ಸೆಗೆಂದು ದಾಖಲಾಗಿದ್ದಳು. ಆಕೆಯ ಗಂಟಲು ದ್ರವವನ್ನು ತೆಗೆದು ಟೆಸ್ಟ್ ಮಾಡಲಾಗಿತ್ತು. ಈ ಸಂದರ್ಭ ಆಕೆಗೂ ಕೊರೊನಾ ಇರುವುದು ದೃಢ ಆಗಿದೆ. ಎಲ್ಲರನ್ನು ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಬೈಂದೂರಿನ ನಾಲ್ವರು ಮತ್ತು ಮಣಿಪಾಲ ಕೆಎಂಸಿಯ ರೋಗಿಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಡಿಸಿ ಜಿ ಜಗದೀಶ್ ಮಾಹಿತಿ ಕೊಟ್ಟಿದ್ದಾರೆ.