ನವದೆಹಲಿ: ಮುಂದಿನ ವರ್ಷದಿಂದ ಪ್ರತಿ ವಾರ ಎಲ್ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.
ಹೌದು. ಸದ್ಯ ಈಗ ಪ್ರತಿ ತಿಂಗಳು ಎಲ್ಪಿಜಿ ದರ ಪರಿಷ್ಕರಣೆ ಆಗುತ್ತಿದೆ. ಪ್ರತಿ ತಿಂಗಳು ದರ ಪರಿಷ್ಕರಣೆ ಆಗುತ್ತಿರುವುದು ತೈಲ ಕಂಪನಿಗಳಿಗೆ ಸಮಸ್ಯೆ ಆಗುತ್ತಿರುವ ಕಾರಣ ಈಗ ವಾರಕ್ಕೊಮ್ಮೆ ದರ ಪರಿಷ್ಕರಣೆ ಬಯಸಿವೆ.
Advertisement
ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಲ್ಲಿಯವರೆಗೆ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ. ಮುಂದಿನ ದಿನಗಳಲ್ಲಿ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.
Advertisement
Advertisement
ಈ ಹಿಂದೆ ಪೆಟ್ರೋಲ್, ಡೀಸೆಲ್ ದರ ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿದಿನ ಪರಿಷ್ಕರಣೆ ಆಗುತ್ತಿದ್ದ ಕಾರಣ ತೈಲ ಬೆಲೆ ಏರಿಕೆ/ ಇಳಿಕೆ ಆಗಿದ್ದರೂ ದರ ಪರಿಷ್ಕರಣೆ ಕೂಡಲೇ ಆಗುತ್ತಿರಲಿಲ್ಲ. ಆದರೆ 2017ರ ಜೂನ್ 16ರ ನಂತರ ದೇಶದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಗೆ ಅನುಗುಣವಾಗಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರ ಬೆಳಗ್ಗೆ 6ಗಂಟೆಗೆ ಪರಿಷ್ಕರಣೆ ಆಗುತ್ತಿದೆ.
Advertisement
ಕಳೆದ ನವೆಂಬರ್ನಲ್ಲಿ ಸಬ್ಸಿಡಿ ಸಹಿತ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 597 ರೂ. ಇತ್ತು. ಆದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಕಾರಣ ಈಗ 697 ರೂ.ಗೆ ಏರಿಕೆಯಾಗಿದೆ.
ವಾರಕ್ಕೊಮ್ಮೆ ದರವನ್ನು ಪರಿಷ್ಕರಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೂ ತೈಲ ಕಂಪನಿಗಳಿಗೆ ದೊಡ್ಡ ಸಮಸ್ಯೆ ಆಗುವುದಿಲ್ಲ. ಈಗ ತಿಂಗಳಿಗೊಮ್ಮೆ ದರ ಪರಿಷ್ಕರಣೆ ಇದ್ದಾಗ ದರ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪನಿಗಳೇ ಹೊರಬೇಕಾಗುತ್ತದೆ. ಈ ನಷ್ಟವನ್ನು ಸರಿದೂಗಿಸಲು ವಾರಕ್ಕೊಮ್ಮೆ ಎಲ್ಪಿಜಿ ದರ ಪರಿಷ್ಕರಣೆಯಾಗುವ ಪ್ರಸ್ತಾಪವನ್ನು ಮುಂದಿಟ್ಟಿದೆ.