ಕೊಪ್ಪಳ: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಈಗ ಹೇಳೋದು ತಪ್ಪು ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಹೇಳಿದ್ದಾರೆ.
ಕೊಪ್ಪಳದ ಬಸಾಪುರದಲ್ಲಿ ಮಾತನಾಡಿದ ಶಾಸಕ, ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ಮಾಡೋದು ಈಗ ಸೂಕ್ತವಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾವು ಹೇಳಿದಂತೆ ಮುಖ್ಯಮಂತ್ರಿ ಮಾಡುವುದಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ. ಹೀಗಾಗಿ ಯಾರೂ ಅದರ ಬಗ್ಗೆ ಪ್ರಸ್ತಾಪ ಮಾಡಬಾರದು. ಈ ಬಗ್ಗೆ ಜಮೀರ್ ಅಹಮ್ಮದ್ ಗೆ ಈಗಾಗಲೇ ಪಕ್ಷ ನಿರ್ದೇಶನ ಕೊಟ್ಟಿದೆ. ಅವರು ಪದೇ ಪದೇ ಹೇಳೋದು ಸರಿಯಲ್ಲ. ಹೀಗೆ ಹೇಳುವುದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದರು.
Advertisement
Advertisement
ಈ ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಿದ್ರೆ ಸಿದ್ದರಾಮಯ್ಯರನ್ನೇ ಮುಖ್ಯಮಂತ್ರಿ ಮಾಡ್ತಾರೆ. ಅದರಲ್ಲಿ ಏನಿದೆ? ಆದರೆ ಇದನ್ನ ತೀರ್ಮಾನ ಮಾಡೋದು ಹೈಕಮಾಂಡ್. ಮುಂದಿನ ಸಿಎಂ ಬಗ್ಗೆ ಈ ಸಮಯದಲ್ಲಿ ಹೇಳುವ ಅವಶ್ಯಕತೆ ಇಲ್ಲ. ಸೂಕ್ತ ಸಮಯದಲ್ಲಿ ಇದನ್ನು ಹೇಳಬೇಕು. ಇನ್ನೂ ಎರಡು ವರ್ಷದ ಬಳಿಕ ಚುನಾವಣೆ ಇದೆ. ಹೈಕಮಾಂಡ್ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ್ರೆ ನಾವು ಅದನ್ನೇ ಹೇಳ್ತೀವಿ ಅಂದ್ರು. ಇದನ್ನೂ ಓದಿ: ಜಮೀರ್ ಮೊದಲು ಬಿಎಸ್ವೈ ಮನೆ ವಾಚ್ಮೆನ್ ಆಗಿ: ರೇಣುಕಾಚಾರ್ಯ
Advertisement
Advertisement
ಬಿಜೆಪಿಯವರ ಬಗ್ಗೆ ನಾವು ಮಾತಾಡೋದು ಸರಿಯಲ್ಲ. ಆದರೆ ಅಮರೇಗೌಡ ರಾಜಕಾರಣ ಮಾಡ್ತಾರೆ ಅಂತ ಕುಷ್ಟಗಿಯ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳುತ್ತಾರೆ. ಹಾಗಾದ್ರೆ ನಾವು ರಾಜಕಾರಣ ಮಾಡೋಕೆ ಬಂದೀವಾ? ದನಕಾಯೋಕೆ ಬಂದೀವಾ ಎಂದರು. ಇದನ್ನೂ ಓದಿ: ಎಚ್ಡಿಕೆ ಸರ್ಕಾರ ಬೀಳಿಸಲು ಯಾರು ಷಡ್ಯಂತ್ರ ಮಾಡ್ತಿಲ್ಲ ಜಮೀರ್ ಅಹಮ್ಮದ್