– ಜಾರಿಯಾಗಲಿದೆ ಜಿಪಿಎಸ್ ಆಧಾರಿತ ವ್ಯವಸ್ಥೆ
– ರಷ್ಯಾ ಸರ್ಕಾರದ ಸಹಾಯದಿಂದ ಜಾರಿ
ನವದೆಹಲಿ: ಮುಂದಿನ 2 ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾಗಳು ಇರುವುದಿಲ್ಲ ಎಂದು ಕೇಂದ್ರ ಸಾರಿಗೆ ಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹೌದು. ಸದ್ಯ ಈಗ ಕೆಲ ಕಿಲೋ ಮೀಟರ್ ಅಂತರದಲ್ಲಿ ಟೋಲ್ ಪ್ಲಾಜಾಗಳು ಇವೆ. ದುಡ್ಡಿನ ಮೂಲಕ ಪಾವತಿ ತಪ್ಪಿಸಲು ಫಾಸ್ಟ್ ಟ್ಯಾಗ್ ಬಂದಿದೆ. ಆದರೂ ವಾಹನಗಳು ಸರದಿಯಲ್ಲಿ ನಿಲ್ಲುವುದು ನಿಂತಿಲ್ಲ. ಆದರೆ ಇನ್ನು ಮುಂದೆ ವಾಹನಗಳು ಟೋಲ್ಗಳಲ್ಲಿ ನಿಲ್ಲದೇ ಸರಗವಾಗಿ ಸಂಚರಿಸುವ ವ್ಯವಸ್ಥೆ ಜಾರಿಯ ಬಗ್ಗೆ ಗಡ್ಕರಿ ಸುಳಿವು ನೀಡಿದ್ದಾರೆ.
Advertisement
Advertisement
ಅಸೋಚಾಮ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವ್ಯಸ್ಥೆ ಜಾರಿ ಮಾಡುವ ಸಂಬಂಧ ಸಿದ್ಧತೆ ನಡೆಸುತ್ತಿದೆ. ಈ ವ್ಯವಸ್ಥೆ ಜಾರಿಯಾದರೆ ಟೋಲ್ ಹಣ ನೇರವಾಗಿ ಬ್ಯಾಂಕ್ ಖಾತೆಯಿಂದ ಜಮೆಯಾಗುತ್ತದೆ ಎಂದು ವಿವರಿಸಿದರು.
Advertisement
ಜಿಪಿಎಸ್ ವ್ಯವಸ್ಥೆ ಜಾರಿ ಸಂಬಂಧ ನಾವು ಈಗಾಗಲೇ ಜಿಪಿಎಸ್ ಆಧಾರಿತ ವ್ಯವಸ್ಥೆ ಜಾರಿ ಸಂಬಂಧ ರೂಪುರೇಷೆಯನ್ನು ಅಂತಿಮಗೊಳಿಸಲಾಗಿದೆ. ರಷ್ಯಾ ಸರ್ಕಾರದ ಸಹಾಯದೊಂದಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
Advertisement
ಇತ್ತೀಚಿನ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಮುಂದಿನ ಎರಡು ವರ್ಷದಲ್ಲಿ ಭಾರತದಲ್ಲಿ ಟೋಲ್ ಬೂತ್ ರಹಿತ ಹೆದ್ದಾರಿಗಳು ಇರಲಿದೆ. ವಾಹನಗಳನ್ನು ಜಿಪಿಎಸ್ ವ್ಯವಸ್ಥೆ ಮೂಲಕ ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಪಾವತಿಯಾಗಲಿದೆ ಎಂದರು.
ಈ ವ್ಯವಸ್ಥೆ ಜಾರಿಯಾದರೆ ಐದು ವರ್ಷದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದಾಯ 1.34 ಲಕ್ಷ ಕೋಟಿಗೆ ಏರಿಕೆ ಆಗಲಿದೆ. ಈ ಹಣಕಾಸು ವರ್ಷದಲ್ಲಿ 34 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಕಾರಣ ಟೋಲ್ ಸಂಗ್ರಹ ಹೆಚ್ಚಾಗುತ್ತಿದೆ. ಕಳೆದ ವರ್ಷ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿದೆ.
2020ರ ಜನವರಿ 1ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನೂ ಓದಿ: ಜನವರಿ 1ರಿಂದ 4 ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ. ಫಾಸ್ಟ್ ಟ್ಯಾಗ್ನಲ್ಲಿ ಹಣ ಹೇಗೆ ಪಾವತಿಯಾಗುತ್ತದೆ?