– ಮಳೆಗಾಲ ಮುಗಿಯುವವರೆಗೆ ಮಡಿಕೇರಿಯಲ್ಲೇ ಮೊಕ್ಕಾಂ
ಮಡಿಕೇರಿ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಎನ್ಡಿಆರ್ಎಫ್ ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಇನ್ನು ಮುಂಗಾರು ಚುರುಕುಗೊಳ್ಳಲಿದೆ. ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಎನ್ಡಿಆರ್ಎಫ್ ತಂಡ ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಆಂಧ್ರ ಪ್ರದೇಶದ ಗುಂಟೂರಿನಿಂದ ತಂಡ ಆಗಮಿಸಿದ್ದು, 23 ಸಿಬ್ಬಂದಿಯನ್ನೊಳಗೊಂಡ ಬೆಟಾನಿಯನ್ ಮಡಿಕೇರಿಯ ಮೈತ್ರಿ ಹಾಲ್ನಲ್ಲಿ ವಾಸ್ತವ್ಯ ಹೂಡಿದೆ. ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆ ಈ ಬಾರಿ ಮಳೆ ಅರಂಭaಕ್ಕೂ ಮುನ್ನವೇ ಎನ್ಡಿಆರ್ಎಫ್ ಟೀಂ ಜಿಲ್ಲೆಗೆ ಬಂದಿದೆ.
Advertisement
Advertisement
ತಂಡ ಮಳೆಗಾಲ ಮುಗಿಯುವರೆಗೂ ಜಿಲ್ಲೆಯಲ್ಲಿ ಮೊಕ್ಕಾಂ ಹೊಡಲಿದ್ದು, ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸಹ ಸಕಲ ಸಿದ್ಧತೆ ಮಾಡಿಕೊಂಡಿದೆ. ಮುಂಗಾರು ಇನ್ನೇನು ರಾಜ್ಯ ಪ್ರವೇಶಿಸಲಿದ್ದು, ಇನ್ನೊಂದೆಡೆ ನಿಸರ್ಗ ಚಂಡಮಾರುತ ಸಹ ಕಾಡುತ್ತಿದೆ. ಈಗಾಗಲೇ ರಾಜ್ಯದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ.