ಭೋಪಾಲ್: ಕೋವಿಡ್-19 ಸಾಂಕ್ರಾಮಿಕ ರೋಗ ಮಧ್ಯೆ ತರಕಾರಿ ತರಲು ಮಾಸ್ಕ್ ಧರಿಸದೇ ಹೋಗಿದ್ದ ಕಾರಣ ಮಹಿಳೆಯನ್ನು, ಕೆಲವು ಪೊಲೀಸ್ ಸಿಬ್ಬಂದಿ ರಸ್ತೆ ಮಧ್ಯೆ ಎಳೆದಾಡಿದ ವಿಡಿಯೋ ವೈರಸ್ ಆಗಿದೆ.
ಮಧ್ಯಪ್ರದೇಶದ ರಾಹ್ಲಿ ಪಟ್ಟಣದಲ್ಲಿ ಸೋಮವಾರ ನಡೆದ ಈ ಘಟನೆಯ ವೀಡಿಯೋ ವೈರಲ್ ಆದ ಬಳಿಕ, ಮಹಿಳೆ ಮೊದಲಿಗೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಮಹಿಳೆ ಮತ್ತು ಮಗಳು ಮಾಸ್ಕ್ ಧರಿಸದೇ ಹೋಗುತ್ತಿದ್ದರಿಂದ ಸೋಮವಾರ ಬೆಳಗ್ಗೆ ಪೊಲೀಸರು ತಡೆದಿದ್ದಾರೆ. ನಂತರ ಶಿಕ್ಷೆ ನೀಡುವುದಾಗಿ ತಿಳಿಸಿ ಜೀಪಿನೊಳಗೆ ಮಹಿಳೆಯನ್ನು ಕರೆದೊಯ್ಯಲು ಪ್ರಯತ್ನಿಸಿದಾಗ ಮಹಿಳೆ ಮತ್ತು ಆಕೆಯ ಮಗಳು ವಿರೋಧಿಸಿದ್ದಾರೆ. ಈ ವೇಳೆ ಪೊಲೀಸರು ಮಹಿಳೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ.
Advertisement
ಮಹಿಳಾ ಪೊಲೀಸ್ ಸೇರಿದಂತೆ ಕೆಲವು ಪೊಲೀಸ್ ಸಿಬ್ಬಂದಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೆಳಕ್ಕೆ ತಳ್ಳಿರುವುದು ಮತ್ತು ಆಕೆಯ ಕೂದಲನ್ನು ಎಳೆದಾಡಿರುವ ದೃಶ್ಯ ವಿಡಿಯೋದಲ್ಲಿದೆ.
Advertisement
ರಾಹ್ಲಿಯ ಉಪ-ವಿಭಾಗೀಯ ಪೊಲೀಸ್ ಕಮಲ್ ಸಿಂಗ್ರವರು, ಈ ವೀಡಿಯೋದಲ್ಲಿ ಅರ್ಧದಷ್ಟು ಘಟನೆಯನ್ನು ಮಾತ್ರ ತೋರಿಸಲಾಗಿದೆ. ಮಹಿಳೆ ಮೊದಲು ಮಹಿಳಾ ಪೊಲೀಸ್ಗೆ ಹೊಡೆದಿದ್ದಾಳೆ. ನಂತರ ಆಕೆಯ ಉಗುರುಗಳಿಂದ ಪೊಲೀಸ್ ಮುಖದ ಮೇಲೆ ಹಾನಿಗೊಳಿಸಿದ್ದಾಳೆ ಎಂದು ಹೇಳಿದ್ದಾರೆ.