ಭುವನೇಶ್ವರ: ಓಡಿಶಾದ ಪೊಲೀಸರ ಸ್ಪೆಷಲ್ ಆಪರೇಷನ್ ಗ್ರೂಪ್ ಮತ್ತು ಸಿಆರ್ಪಿಎಫ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾವೋವಾದಿಗಳ ನಾಲ್ಕು ಶಿಬಿರಗಳನ್ನು ಧ್ವಂಸಗೊಳಿಸಿದ್ದಾರೆ. ಒಡಿಶಾದ ಬರ್ಗಢ ಜಿಲ್ಲೆಯ ಗಂಧಮರ್ದನ್ ರಕ್ಷಿತ ಅರಣ್ಯಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಗಂಧಮರ್ದನ್ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕೆಲ ಮಾವೋವಾದಿಗಳು ನೆಲೆಸಿ ರಾಜ್ಯದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಖಚಿತ ಮಾಹಿತಿ ಲಭ್ಯವಾಗಿತ್ತು ಎಂದು ಓಡಿಶಾ ಪೊಲೀಸರು ತಿಳಿಸಿದ್ದಾರೆ.
Advertisement
ಜಂಟಿ ಕಾರ್ಯಾಚರಣೆ ವೇಳೆ 10 ರಿಂದ 15 ಮಾವೋವಾದಿಗಳು ನಮ್ಮ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದರು. ಘಟನಾ ಸ್ಥಳದಲ್ಲಿ ಕೆಲ ಕೈ ಬರಹದ ಪ್ರತಿಗಳು ಲಭ್ಯವಾಗಿವೆ. ಮಾವೋವಾದಿಗಳಿಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಇರಬಹುದು ಎಂದು ಎಸ್.ಪಿ. ಪದ್ಮಿನಿ ಸಾಹೂ ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement