ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಕೊರೊನಾ ಅಲೆಯ ಭೀತಿ ಎದುರಾಗಿದೆ. ಜನವರಿ, ಫೆಬ್ರವರಿಗೆ ಹೋಲಿಸಿದರೆ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆತಂಕ ಎದುರಾಗಿದೆ.
ಜನವರಿ 31 ರಂದು ಬೆಂಗಳೂರಿನಲ್ಲಿ 242, ಫೆಬ್ರವರಿ 28 ರಂದು 312 ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಪ್ರತಿ ನಿತ್ಯ 200 -300 ಚಿಲ್ಲರೆ ಪ್ರಕರಗಳು ದಾಖಲಾಗುತ್ತಿದ್ದರೆ ಈಗ 400ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿದೆ.
Advertisement
Advertisement
ಯಾವ ದಿನ ಎಷ್ಟು?
ಮಾ. 07 – 389
ಮಾ. 08 – 287
ಮಾ. 09 – 363
ಮಾ. 10 – 488
Advertisement
ಏರಿಕೆಗೆ ಕಾರಣ ಏನು?
ಹೊರ ರಾಜ್ಯದವರು ದೊಡ್ಡ ತಲೆ ಬಿಸಿಗೆ ಕಾರಣವಾಗಿದ್ದಾರೆ. ಕೇರಳ, ಮಹಾರಾಷ್ಟ್ರದಿಂದ ಬಂದವರಿಂದಲೇ ಕೇಸ್ ಜಾಸ್ತಿಯಾಗಿ ಸಂಖ್ಯೆಗಳ ಹೆಚ್ಚಳವಾಗುತ್ತಿದೆ. ಮದುವೆ, ಧಾರ್ಮಿಕ ಕಾರ್ಯಕ್ರಮ ಇತ್ಯಾದಿ ಶುಭ ಕಾರ್ಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಾಮಾಜಿಕ ಅಂತರ ಕಾಪಾಡದ ಕಾರಣ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
Advertisement
ಹಿಂದೆ ಪ್ರತಿ ನಿತ್ಯ ರಾಜ್ಯಾದ್ಯಂತ 1 ಲಕ್ಷ ಹೆಚ್ಚು ಕೊರೊನಾ ಟೆಸ್ಟ್ ನಡೆಯುತ್ತಿತ್ತು. ಆದರೆ ಈಗ ಇಳಿಕೆಯಾಗಿದ್ದು ಬುಧವಾರ 70,133 ಪರೀಕ್ಷೆ ಮಾಡಲಾಗಿದೆ. ಹೀಗಾಗಿ ಸರ್ಕಾರ ಕೊರೊನಾ ಟೆಸ್ಟ್ ಹೆಚ್ಚಿಸಲು ಮುಂದಾಗಿದೆ.
ಸದ್ಯ ಬೆಂಗಳೂರು ನಗರದಲ್ಲಿ ಮಾರ್ಚ್ 10ರ ಕೋವಿಡ್ ವರದಿ ಪ್ರಕಾರ ಇಲ್ಲಿಯವರೆಗೆ 4,09,163 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ 3,99,124 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 5,526 ಸಕ್ರಿಯ ಪ್ರಕರಣಗಳಿದ್ದು, 4,512 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ 9,56,801 ಮಂದಿಗೆ ಸೋಂಕು ಬಂದಿದ್ದು ಈ ಪೈಕಿ 9,36,947 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 7,456 ಸಕ್ರಿಯ ಪ್ರಕರಣಗಳಿದ್ದು, 12,379 ಮಂದಿ ಮೃತಪಟ್ಟಿದ್ದಾರೆ.