ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಡವರು ದನದ ಮಾಂಸ ತಿನ್ನುತ್ತಾರೆ ಅನ್ನೋ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಸಿದ್ದರಾಮಯ್ಯ ಈ ಆರೋಪಿಯಾಗಿದ್ದಾರೆ. ಆದರೆ ನಾವು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ. ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಕೋಮುದ್ವೇಷದ ಬೆಂಕಿ ಹಚ್ಚಿದವರು. ಯಾರನ್ನೋ ಮೆಚ್ಚಿಸುವುದಕ್ಕಾಗಿ ಅವರು ಕೊಡವರನ್ನು ಹೀಯಾಳಿಸಬಾರದಿತ್ತು ಎಂದು ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದರು.
Advertisement
ತಮ್ಮ ಹೇಳಿಕೆಗೆ ನಿನನೆ ಚಿಕ್ಕಮಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದ ಮಾಜಿ ಸಿಎಂ, ಬಿಜೆಪಿಯವರು ಗೋಮಾಂಸ ನಿಷೇಧ ಕಾಯ್ದೆ ತಂದಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದ್ರೆ ತಿಂತೀನಿ ಅಂದೆ. ನನ್ನ ಇಷ್ಟ, ನೀನು ಯಾವನ್ ಅದನ್ನು ಕೇಳೋಕೆ. ನಂಗಿಷ್ಟ ನಾನು ತಿಂತೀನಿ ಅಂದೆ. ಅಷ್ಟಕ್ಕೆ ನನ್ನ ವಿರುದ್ಧ ಏನು ವ್ಯಾಖ್ಯಾನಗಳು, ಚರ್ಚೆಗಳು ಎಂದು ಕುಟುಕಿದ್ದರು.
Advertisement
ಕಳೆದ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಮಾಡಲು ತಮ್ಮ ಸ್ವ-ಗ್ರಾಮ ಸಿದ್ದರಾಮನ ಹುಂಡಿಗೆ ತೆರಳಿದ್ದು, ಈ ವೇಳೆ ಸ್ನೇಹಿತರ ಮನೆಯಲ್ಲಿ ಮಾಂಸಾಹಾರ ಭೋಜನ ಸವಿದಿದ್ದರು. ಅಂದು ಹನುಮ ಜಯಂತಿಯಾಗಿದ್ದರಿಂದ ಸ್ನೇಹಿತರೊಬ್ಬರು ಅಣ್ಣ ಇಂದು ಹನುಮ ಜಯಂತಿ ಎಂದು ನೆನಪಿಸಿದ್ದಾರೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದ ಸಿದ್ದರಾಮಯ್ಯ, ಯಾವ ಜಯಂತಿನ್ಲಾ..? ಹನುಮ ಹುಟ್ಟಿದ ತಾರೀಕು ನನಗೆ ಗೊತ್ತಾ..? ಗೊತ್ತಿಲ್ಲ ತಾನೇ, ಏನೂ ಆಗಲ್ಲ ತಿನ್ಲಾ ಎಂದು ಗದರಿಸಿದ್ದರು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.