ಬೆಂಗಳೂರು: ರಾಜಾಹುಲಿಯ ರಾಜ್ಯಾಡಳಿತ ಇಂದಿಗೆ ಕೊನೆಯಾಗಿದ್ದು, ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
Advertisement
ರಾಜೀನಾಮೆ ಬೆನ್ನಲ್ಲೇ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿ ನಿವಾಸ ಖಾಲಿ ಖಾಲಿ ಹೊಡೆಯುತ್ತಿದೆ. ಜೊತೆಗೆ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ. ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ಸಿಎಂ ನಿವಾಸದ ಎರಡು ಕಡೆ ರಸ್ತೆಗೆ ಮೂವತ್ತಕ್ಕೂ ಹೆಚ್ಚು ಬ್ಯಾರಿಕೇಡ್ ಅಳವಡಿಸಲಾಗಿದೆ. ಸದ್ಯ ಸಿ.ಎಂ ಕುಟುಂಬಸ್ಥರು ಯಾರು ಡಾಲರ್ಸ್ ಕಾಲೋನಿ ನಿವಾಸದಲ್ಲಿಲ್ಲ. ಕೇವಲ ಅಡುಗೆ ಸಿಬ್ಬಂದಿ, ಡ್ರೈವರ್ ಗಳು ಹಾಗೂ ಮನೆ ಕೆಲಸದವರು ಮಾತ್ರ ಇದ್ದಾರೆ.
Advertisement
Advertisement
ಎರಡು ವರ್ಷದ ಪೂರೈಸಿದ ಬಿಜೆಪಿ ಸಂಭ್ರಮಾಚರಣೆ ಕಾರ್ಯಕ್ರಮದ ವೇಳೆ ಮಾತನಾಡಿದ ಯಡಿಯೂರಪ್ಪನವರು, 75 ವರ್ಷ ವಯಸ್ಸಾಗಿದ್ರೂ ಪಕ್ಷ ನನಗೆ ಸಿಎಂ ಸ್ಥಾನ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಈ ರಾಜೀನಾಮೆಯನ್ನು ನೋವಿನಂದಲ್ಲ, ಸಂತೋಷದಿಂದ ನೀಡುತ್ತಿದ್ದೇನೆ ಎಂದು ಹೇಳಿ ರಾಜ ಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದರು.
Advertisement
ಇಲ್ಲಿಯವರೆಗೂ ಬಿ.ಎಸ್.ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆದ್ರೂ ಪೂರ್ಣವಾಧಿಯನ್ನು ಪೂರೈಸಲು ಆಗಿಲ್ಲ.