ಬೆಂಗಳೂರು: ರಾಜ್ಯಸಭೆ ಮಾಜಿ ಸದಸ್ಯ, ನಿವೃತ್ತ ನ್ಯಾಯಮೂರ್ತಿ ಮಂಡಗದ್ದೆ ರಾಮಾಜೋಯಿಸ್(89) ನಿಧನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಅರಗದಲ್ಲಿ ಜನಿಸಿದ್ದರಾಮಾಜೋಯಿಸ್ ಇಂದು ಬೆಳಿಗ್ಗೆ 7.30 ರ ವೇಳೆಗೆ ಅವರು ವಿಧಿವಶರಾಗಿದ್ದಾರೆ. ಜಾರ್ಖಂಡ್ ಮತ್ತು ಬಿಹಾರ ರಾಜ್ಯಪಾಲರೂ ಆಗಿದ್ದ ರಾಮಾ ಜೋಯಿಸ್ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
Advertisement
ನ್ಯಾಯ ಮೂರ್ತಿ
ಮ. ರಾಮಾಜೋಯಿಸ್ ರವರು ಇನ್ನಿಲ್ಲ.
ಇಂದು ಬೆಳಿಗ್ಗೆ 7.30 ರ ವೇಳೆಗೆ ಅವರು ಕಾಲವಾದರು.
ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
— S.Suresh Kumar (@nimmasuresh) February 16, 2021
Advertisement
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ರಾಮಾಜೋಯಿಸ್ರವರು ಇನ್ನಿಲ್ಲ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.
Advertisement
ಭಾರತೀಯ ಜನತಾ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಮಾ ಜೋಯಿಸ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.