ಡೆಹರಾಡೂನ್: ಉತ್ತರಾಖಂಡ ನೂತನ ಮುಖ್ಯಮಂತ್ರಿ ತೀರ್ಥ್ ಸಿಂಗ್ ರಾವತ್ ಕಳೆದ ಕೆಲ ದಿನಗಳಿಂದ ಸುದ್ದಿಯ ಮುನ್ನಲೆಯಲ್ಲಿದ್ದಾರೆ. ರಾಜಕೀಯದಲ್ಲಾದ ಬದಲಾವಣೆಗಳಿಂದ ಸಿಎಂ ಪಟ್ಟ ಅಲಂಕರಿಸಿದರು. ಇದೀಗ ಮಹಿಳೆಯರು ಧರಿಸುವ ಬಟ್ಟೆ ಬಗ್ಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ.
Advertisement
ಮಕ್ಕಳ ಹಕ್ಕು ಮತ್ತು ಸಂರಕ್ಷಣಾ ಆಯೋಗದ ಕಚೇರಿ ಉದ್ಘಾಟಿಸಿ ಮಾತನಾಡಿದ ಸಿಎಂ, ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ? ಹರಿದ ಜೀನ್ಸ್ ಧರಿಸುವಿಕೆ ಇದ್ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ. ಈ ಜೀವನಶೈಲಿ ಪೋಷಕರ ಮೇಲೆ ನಿರ್ಧರಿತವಾಗಿರುತ್ತೆ ಎಂದಿದ್ದಾರೆ.
Advertisement
Advertisement
ಒಂದು ದಿನ ವಿಮಾನಯಾನ ಮಾಡುವಾಗ ಮಹಿಳೆ ಇಬ್ಬರು ಮಕ್ಕಳ ಜೊತೆ ಬಂದು ಪಕ್ಕದಲ್ಲಿ ಕುಳಿತರು. ಮಹಿಳೆ ಹರಿದ ಜೀನ್ಸ್ ಧರಿಸಿದ್ದರು. ಸೋದರಿ ಎಲ್ಲಿಗೆ ಹೋಗ್ತೀದ್ದೀರಾ ಅಂತ ಕೇಳಿದಾಗ ಮಹಿಳೆ ತಮ್ಮ ಕಿರು ಪರಿಚಯ ಮಾಡಿಕೊಂಡರು. ಪತಿ ಜೆಎನ್ಯುನಲ್ಲಿ ಉಪನ್ಯಾಸಕರಾಗಿದ್ದು, ತಾನು ಎನ್ಜಿಓ ನಡೆಸುತ್ತಿರೋದಾಗಿ ತಿಳಿಸಿದರು. ಹರಿದ ಜೀನ್ಸ್ ಧರಿಸಿದ ಮಹಿಳೆ ಎನ್ಜಿಓ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ. ನಮ್ಮ ಶಾಲಾ ದಿನಗಳಲ್ಲಿ ಈ ರೀತಿಯ ಜೀವನ ಶೈಲಿ ಇರಲಿಲ್ಲ ಎಂದು ಹೇಳಿದರು.
Advertisement
ಇಂದಿನ ಯುವ ಪೀಳಿಗೆ ವಿದೇಶಿ ಸಂಸ್ಕೃತಿಗೆ ಮೋಹಿತರಾಗುತ್ತಿರೋದು ಆತಂಕದ ವಿಷಯ. ಡ್ರಗ್ಸ್, ನಶೆ ಸೇರಿದಂತಹ ವ್ಯಾಮೋಹಕ್ಕೆ ಒಳಗಾಗಿ ಸುಸಂಕೃತ ಜೀವನ ನಡೆಸಲು ಯುವ ಜನಾಂಗಕ್ಕೆ ಸಾಧ್ಯವಾಗುತ್ತಿಲ್ಲ ಎಂದರು. ಇದನ್ನೂ ಓದಿ: ತೀರ್ಥ್ ಸಿಂಗ್ ರಾವತ್ ಉತ್ತಾರಖಂಡ ಹೊಸ ಸಿಎಂ