– ಕುಸಿದ ವೆಲಾಸಿಟಿಗೆ ಆಸರೆಯಾದ ಸುಷ್ಮಾ, ಲೂಸೆ
ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್-2020ಯ ಮೊದಲನೇ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಹರ್ಮನ್ಪ್ರೀತ್ ಕೌರ್ ನೇತೃತ್ವದ ಸೂಪರ್ನೋವಾಸ್ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿದೆ.
ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸೂಪರ್ನೋವಾಸ್ ತಂಡ ಚಮರಿ ಅಥಾಪತ್ತು ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಭರ್ಜರಿ ಬ್ಯಾಟಿಂಗ್ ಸಲುವಾಗಿ ನಿಗದಿತ 20 ಓವರಿನಲ್ಲಿ 126 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ವೆಲಾಸಿಟಿ ತಂಡ ಆರಂಭಿಕ ಆಘಾತ ಅನುಭವಿಸಿದರೂ ನಂತರ ಮಧ್ಯಮ ಕ್ರಮಾಂಕದಲ್ಲಿ ಸುಷ್ಮಾ ವರ್ಮಾ ಮತ್ತು ಸುನೆ ಲೂಸ್ ಸ್ಫೋಟಕ ಬ್ಯಾಟಿಂಗ್ನಿಂದ ಒಂದು ಬಾಲ್ ಉಳಿದಂತೆ 129 ರನ್ಗಳಿಸಿ ಐದು ವಿಕೆಟ್ಗಳಿಂದ ಗೆದ್ದು ಬೀಗಿತು.
Advertisement
What a thriller we’ve witnessed here in Sharjah! ????#Velocity pull off a 5-wicket over #Supernovas in the opening encounter of #JioWomensT20Challenge ????????????#SNOvVEL pic.twitter.com/jTB9yVgM1y
— IndianPremierLeague (@IPL) November 4, 2020
Advertisement
ಸುಷ್ಮಾ, ಲೂಸೆ ಭರ್ಜರಿ ಜೊತೆಯಾಟ
ಇಂದಿನ ಪಂದ್ಯದಲ್ಲಿ ವೆಲಾಸಿಟಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ತಂಡ ಟಾಪ್ ಆರ್ಡರ್ ಬ್ಯಾಟ್ಸ್ ಮನ್ಗಳಾದ ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್ ಮತ್ತು ಮಿಥಾಲಿ ರಾಜ್ ಬೇಗ ಔಟ್ ಆದರು. ಆದರೆ ನಂತರ ಜೊತೆಯಾದ ಸುಷ್ಮಾ ವರ್ಮಾ (34 ರನ್, 33 ಎಸೆತ, 02 ಸಿಕ್ಸ್) ಮತ್ತು ಸುನೆ ಲೂಸ್ (37 ರನ್, 21 ಎಸೆತ 4 ಫೋರ್ 1 ಸಿಕ್ಸ್) ಸಮೇತ 36 ಎಸೆತದಲ್ಲಿ 51 ರನ್ಗಳ ಜೊತೆಯಾಟವಾಡಿ ವೆಲಾಸಿಟಿ ತಂಡಕ್ಕೆ ಗೆಲುವು ತಂದಿತ್ತರು.
Advertisement
Just when Veda Krishnamurthy was looking set to go big, Radha Yadav picks her wicket ????????
At the end of 15 overs, #Velocity are 77/4.
Live: https://t.co/Yg9YXOZxBM#SNOvVEL #JioWomensT20Challenge pic.twitter.com/j5HOmAcqdf
— IndianPremierLeague (@IPL) November 4, 2020
Advertisement
ಸೂಪರ್ನೋವಾಸ್ ನೀಡಿದ 127 ರನ್ಗಳ ಗುರಿ ಬೆನ್ನಟ್ಟಿದ ವೆಲಾಸಿಟಿ ತಂಡಕ್ಕೆ ಸೂಪರ್ನೋವಾಸ್ ತಂಡದ ವೇಗಿ ಅಯಾಬೊಂಗಾ ಖಾಕ ಶಾಕ್ ನೀಡಿದರು. ಇನ್ನಿಂಗ್ಸ್ ನ ಮೊದಲೇ ಓವರಿನಲ್ಲೇ ಡೇನಿಯಲ್ ವ್ಯಾಟ್ ಔಟ್ ಆದರು. ಇದಾದ ನಂತರ ಅಬ್ಬರದ ಬ್ಯಾಟಿಂಗ್ ಮುಂದಾದ ಶಫಾಲಿ ವರ್ಮಾ ಹ್ಯಾಟ್ರಿಕ್ ಬೌಂಡರಿಗಳನ್ನು ಸಿಡಿಸಿದರು. ಆದರೆ ಮೂರನೇ ಓವರ್ ಕೊನೆಯ ಬಾಲಿನಲ್ಲಿ 11 ಬಾಲಿಗೆ 17 ರನ್ ಸಿಡಿಸಿದ್ದ ಶಫಾಲಿ ವರ್ಮಾ ಅಯಾಬೊಂಗಾ ಖಾಕಗೆ ಔಟ್ ಆದರು.
ನಂತರ ಜೊತೆಯಾದ ನಾಯಕಿ ಮಿಥಾಲಿ ರಾಜ್ ಮತ್ತು ಕನ್ನಡತಿ ವೇದ ಕೃಷ್ಣಮೂರ್ತಿ ತಾಳ್ಮೆಯಿಂದ ಜೊತೆಯಾಟವಾಡಿದರು. ಆದರೆ ಎಂಟನೇ ಓವರಿನ ಮೂರನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಿಥಾಲಿ 7 ರನ್ ಗಳಿಸಿ ಶಶಿಕಲಾ ಸಿರಿವರ್ಧನೆ ಅವರಿಗೆ ಔಟ್ ಆದರು. ಇದಾದ ಬಳಿಕ 28 ಬಾಲಿಗೆ 29 ರನ್ ಸಿಡಿಸಿ ವೆಲಾಸಿಟಿ ಭರವಸೆ ಮೂಡಿಸಿದ್ದ ಕನ್ನಡತಿ ವೇದಾ ಕೃಷ್ಣಮೂರ್ತಿ 12ನೇ ಓವರ್ ಕೊನೆಯ ಬಾಲಿನಲ್ಲಿ ರಾಧಾ ಯಾದವ್ ಅವರಿಗೆ ಔಟ್ ಆದರು.
ವೇದಾ ಔಟ್ ಆದ ನಂತರ ಜೊತೆಯಾದ ಸುಷ್ಮಾ ವರ್ಮಾ ಮತ್ತು ಸುನೆ ಲೂಸ್ ಸ್ಫೋಟಕ ಆಟಕ್ಕೆ ಮುಂದಾದರು. ಈ ಜೋಡಿ ಐದನೇ ವಿಕೆಟ್ಗೆ 35 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 19ನೇ ಓವರಿನ ಐದನೇ ಬಾಲಿನಲ್ಲಿ 33 ಬಾಲಿಗೆ 34 ರನ್ ಸಿಡಿಸಿ ಆಡುತ್ತಿದ್ದ ಸುಷ್ಮಾ ವರ್ಮಾ ಅವರು ಬೌಂಡರಿ ಗೆರೆಯ ಬಳಿ ಕ್ಯಾಚ್ ಕೊಟ್ಟು ಪೂನಂ ಯಾದವ್ಗೆ ಔಟ್ ಆದರು. ಆದರೆ ಶಿಖಾ ಪಾಂಡೆ ಮತ್ತು ಸುನೆ ಲೂಸ್ ಸೇರಿಕೊಂಡು ಕೊನೆಯ ಓವರಿನಲ್ಲಿ 9 ರನ್ ಭಾರಿಸಿ ವೆಲಾಸಿಟಿ ತಂಡಕ್ಕೆ ಗೆಲುವು ತಂದಿತ್ತರು.