– ಬಹಿರ್ದೆಸೆಗೆ ತೆರಳಿ ಹೊರಬರಲಾಗದೆ ಯುವಕರ ಪರದಾಟ
ರಾಯಚೂರು: ಜಿಲ್ಲೆಯ ಮಸ್ಕಿ ಕಿರು ಜಲಾಶಯದಿಂದ ಏಕಾಏಕಿ ಭಾರೀ ಪ್ರಮಾಣದ ನೀರು ಹೊರ ಹರಿಸಿದ್ದರಿಂದ ಮಸ್ಕಿ ಹಳ್ಳದಲ್ಲಿ ಇಬ್ಬರು ಯುವಕರು ಸಿಲುಕಿದ್ದು ಹೊರಬರಲಾಗದೆ ಪರದಾಡುತ್ತಿದ್ದಾರೆ. ಹಳ್ಳಕ್ಕೆ ಬಹಿರ್ದಸೆಗೆ ಹೋಗಿದ್ದ ಚನ್ನಬಸಪ್ಪ ಹಾಗು ಜಲೀಲ ಹಳ್ಳದ ಮಧ್ಯೆ ಸಿಲುಕಿಕೊಂಡಿದ್ದಾರೆ.
Advertisement
ಮಸ್ಕಿ ನಾಲೆಯ ಜಲಾನಯನ ಪ್ರದೇಶಗಳಾದ ಗಜೇಂದ್ರಗಡ, ಕುಷ್ಟಗಿ ಭಾಗದಲ್ಲಿ ಮಳೆಯಾಗಿದ್ದರಿಂದ ಮಸ್ಕಿ ಆಣೆಕಟ್ಟೆಯಿಂದ ನೀರು ಬಿಡಲಾಗಿದೆ. ನಾಲ್ಕು ಗೇಟ್ಗಳ ಮೂಲಕ 1,600 ಕ್ಯೂಸೆಕ್ ನೀರು ಬಿಡಲಾಗಿದೆ. ಮಳೆ ಹಿನ್ನೆಲೆ ಮಸ್ಕಿ ನಾಲಾ ಯೋಜನೆಯಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ಹಳ್ಳಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.
Advertisement
Advertisement
ಬೆಳಗಿನ ಜಾವ ಪಟ್ಟಣದ ಬಳಿಯ ಹಳ್ಳದಲ್ಲಿ ನೀರು ಕಡಿಮೆ ಇರುವಾಗ ಬಹಿರ್ದಸೆಗೆ ಹೋಗಿದ್ದ ಇಬ್ಬರು ಏಕಾಏಕಿ ನೀರು ಬಂದಿದ್ದರಿಂದ ವಾಪಸ್ಸು ಬರಲು ಆಗದೆ ಹಳ್ಳದಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳ, ಪೊಲೀಸರು ಭೇಟಿ ನೀಡಿದ್ದು ರಕ್ಷಣಾ ಕಾರ್ಯ ಆರಂಭವಾಗಿದೆ. ಆದ್ರೆ ಹಳ್ಳದಲ್ಲಿ ಕ್ಷಣಕ್ಷಕ್ಕೂ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಹಳ್ಳದ ಮಧ್ಯದಲ್ಲಿ ಸಿಲುಕಿರುವುದರಿಂದ ಯುವಕರನ್ನ ಹೊರತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
Advertisement