ಚಿತ್ರದುರ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕಳ್ಳಿರೊಪ್ಪ ಗ್ರಾಮದಲ್ಲಿ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳ ನಷ್ಟವಾಗಿದೆ. ರೈತ ಹೇಮಣ್ಣ ಬೆಳೆದಿದ್ದ ಈರುಳ್ಳಿ ನಾಶವಾಗಿದೆ. ಹೇಮಣ್ಣ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ ನಿರಂತರ ಮಳೆಯಿಂದಾಗಿ ಈರುಳ್ಳಿ ಸಂಪೂರ್ಣವಾಗಿ ನೀರಲ್ಲಿ ಕೊಚ್ಚಿ ಹೋಗಿದೆ.
Advertisement
Advertisement
ಜಮೀನಿನಲ್ಲಿದ್ದ ಈರುಳ್ಳಿ ಉಳಿಸಿಕೊಳ್ಳಲು ರೈತ ಹರಸಾಹಸ ಮಾಡಿದ್ದಾರೆ. ಆದರೆ ಅಪಾರ ಪ್ರಯಾಣದ ಈರುಳ್ಳಿ ನಾಶವಾಗಿದೆ. ಇದರಿಂದ ಲಕ್ಷಾಂತರ ಬಂಡವಾಳವಾಗಿದೆ. ಹೀಗಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಹೇಮಣ್ಣ ಆಗ್ರಹಿಸಿದ್ದಾರೆ. ಸದ್ಯಕ್ಕೆ ರೈತ ಹೇಮಣ್ಣ ಬೆಳೆ ನಾಶದಿಂದ ದಾರಿ ಕಾಣದೆ ಕಂಗಾಲಾಗಿದ್ದಾರೆ.
Advertisement
Advertisement
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸತತ ಎಂಟು ವರ್ಷಗಳಿಂದ ಬತ್ತಿ ಹೋಗಿದ್ದ ಜಿಲ್ಲೆಯ ಮೊಳಕಾಲ್ಮೂರು ಭಾಗದ ಹಳ್ಳ, ಕೊಳ್ಳ ಸೇರಿದಂತೆ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಮೊಳಕಾಲ್ಮೂರು ತಾಲೂಕಿನಾದ್ಯಂತ ವಿವಿಧೆಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ತಳವಾರ ಹಳ್ಳಿ ಬಳಿಯ ಸಿದ್ಲಹಳ್ಳ ತುಂಬಿ ಹರಿಯುತ್ತಿದೆ. ಅಲ್ಲದೇ ಕಳೆದ ಎಂಟು ವರ್ಷಗಳ ಹಿಂದೆ ಕೆರೆ ಕೋಡಿ ಬಿದ್ದಿದ್ದ ಪಕ್ಕುರ್ತಿ ಕೆರೆ ಈ ಬಾರಿ ಮತ್ತೆ ಕೋಡಿ ಬಿದ್ದಿದೆ.