ಬೆಂಗಳೂರು: ಕೊರೋನಾವನ್ನು ಮುಕ್ತ ಮಾಡಲು ಇರೋ ಮಾರ್ಗ ವ್ಯಾಕ್ಸಿನ್. ವ್ಯಾಕ್ಸಿನ್ ಪಡೆಯಲು ಮೊದಮೊದಲು ಜನ ಹಿಂಜರಿಕೆ ತೋರುತ್ತಿದ್ದರು. ಆದರೆ ಎರಡನೇ ಅಲೆ ಬಂದ್ಮೇಲೆ ವ್ಯಾಕ್ಸಿನ್ ಪಡೆಯೋದು ಎಷ್ಟು ಮುಖ್ಯ.
Advertisement
ವ್ಯಾಕ್ಸಿನ್ ಹೇಗೆ ಕೊರೋನಾ ವೈರಸ್ ಗೆ ಮಾರಕವಾಗಿದೆ ಅಂತಾ ಜನ ತಿಳಿದುಕೊಂಡಿದ್ದಾರೆ. ಹಾಗಾಗಿ ವ್ಯಾಕ್ಸಿನ್ ಪಡೆಯಲು ಜನ ಮಳೆಯನ್ನೂ ಲೆಕ್ಕಿಸದೇ ಕ್ಯೂ ನಿಂತಿದ್ದಾರೆ. ಬೆಳಗ್ಗೆ 9 ಗಂಟೆಯ ಬಳಿಕ ವ್ಯಾಕ್ಸಿನ್ ಹಾಕುವ ಕಾರ್ಯ ಶುರುವಾಗುತ್ತೆ. ಆದರೆ ವ್ಯಾಕ್ಸಿನ್ ಪಡೆಯಲು ಜನ ಬೆಳಗ್ಗಿನ ಜಾವ 5 ಗಂಟೆಯಿಂದಲೇ ಮಲ್ಲೇಶ್ವರಂನ ವ್ಯಾಕ್ಸಿನ್ ಸೆಂಟರ್ ಮುಂದೆ ಬಂದಿದ್ದಾರೆ.
Advertisement
Advertisement
ಮೊನ್ನೆಯಿಂದಲೂ ಬೆಂಗಳೂರಿನಲ್ಲಿ ಮಳೆ ಆಗ್ತಿದೆ. ಇಂದು ಸಹ ತುಂತುರು ಮಳೆಯಾಗ್ತಿದೆ. ಮಳೆ ಬಂದ್ರೂ ಪರವಾಗಿಲ್ಲ ವ್ಯಾಕ್ಸಿನ್ ಪಡೆಯಲೇ ಬೇಕು ಅಂತಾ ಜನ ಮಳೆಯನ್ನೂ ಲೆಕ್ಕಿಸದೇ ಕ್ಯೂ ನಿಂತಿದ್ದಾರೆ. ಮಳೆ ಬರ್ತಿದೆ, ವ್ಯಾಕ್ಸಿನ್ ಕೊಡೋದನ್ನ ಬೇಗ ಶುರು ಮಾಡಿದ್ರೆ ಒಳ್ಳೆಯದು, ಸರ್ಕಾರ ವ್ಯಾಕ್ಸಿನ್ ಕೊಡದಕ್ಕೆ ಒಂದು ವರ್ಷ ಮಾಡೋ ಆಗೆ ಕಾಣ್ತಿದೆ. ಸರಿಯಾದ ವ್ಯವಸ್ಥೆ ಮಾಡಿ ಬೇಗ ಬೇಗವಾಗಿ ವ್ಯಾಕ್ಸಿನ್ ಕೊಟ್ರೆ ಉತ್ತಮ, ಸರ್ಕಾರದವರು ಆರಾಮವಾಗಿ ಮನೆಯಲ್ಲಿ ಇದ್ದಾರೆ.
Advertisement
ನಾವೂ ವ್ಯಾಕ್ಸಿನ್ಗಾಗಿ ಹೀಗೆ ಮಳೆಯಲ್ಲಿ ನೆನೆಯಬೇಕಾಗಿದೆ. ಕೊನೆ ಪಕ್ಷ ವ್ಯಾಕ್ಸಿನ್ ಸೆಂಟರ್ ಒಳಕ್ಕಾದ್ರೂ ಬಿಡಬೇಕು, ಅದು ಸಹ ಮಾಡೋಲ್ಲ, ಸರ್ಕಾರ ಇದಕ್ಕೆಲ್ಲ ಸರಿಯಾದ ವ್ಯವಸ್ಥೆ ಮಾಡಿದ್ರೆ ಉತ್ತಮ ಅಂತಾ ಜನ ಮಳೆಯಲ್ಲೇ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ.