ಮಳೆಗಾಲ ಅಂದ್ರೆ ಕೆಲವರಿಗೆ ತುಂಬಾ ಕಿರಿಕಿರಿ ಅನಿಸಿದ್ರೆ, ಇನ್ನೂ ಕೆಲವರಿಗೆ ತುಂಬಾ ಇಷ್ಟ. ಈ ಮಧ್ಯೆ ನಾವು ನಮ್ಮ ತ್ವಚೆಯ ಮೇಲೂ ಗಮನಹರಿಸಬೇಕಾದ ಅವಶ್ಯಕತೆ ಇದೆ. ಮಳೆಗಾಲದಲ್ಲಿ ಚರ್ಮದ ತುರಿಕೆ, ಅಲರ್ಜಿ, ಗುಳ್ಳೆ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ಸಮಸ್ಯೆಗಳಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬಹುದಾದ ಕೆಲವೊಂದು ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ.
* ನಿಮ್ಮ ಚರ್ಮ ಒಣಗಿದಂತೆ ಅಥವಾ ತುರಿಕೆ ಕಂಡುಬಂದರೆ ಕೊಬ್ಬರಿ ಎಣ್ಣೆಯನ್ನು ಹಚ್ಚೊ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಈ ರೀತಿಯ ಸಮಸ್ಯೆಯಿಂದ ಪಾರಾಗಬಹುದು.
Advertisement
Advertisement
* ಸ್ನಾನ ಮಾಡಿದ ಬಳಿಕ ಮಾಯಿಸ್ಚರೈಸರ್ ಬಳಕೆ ಮಾಡಿ.
Advertisement
* ನೀರು, ಜ್ಯೂಸ್ ಹೆಚ್ಚಾಗಿ ಕುಡಿಯಿರಿ. ಹೆಚ್ಚಾಗಿ ಬಿಸಿ ನೀರು ಕುಡಿಯುವುದು ಸೂಕ್ತ. ಅಲ್ಲದೆ ಮುಖವನ್ನು 3-4 ಬಾರಿ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗಿ ಆಕರ್ಷಕ ತ್ವಚೆ ಕಾಂತಿ ಪಡೆಯಬಹುದು.
Advertisement
* ಮುಖದಲ್ಲಿ ಮೊಡವೆ ಹಾಗೂ ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಮುಲಾಮು ಹಚ್ಚುವ ಬದಲು ಅರಿಶಿಣ ಹಚ್ಚುವುದು ಹೆಚ್ಚು ಸೂಕ್ತ.
* ನಿಮ್ಮದು ಆಯಿಲ್ ಸ್ಕಿನ್ ಆಗಿದ್ದರೆ ಬೇವಿನ ಎಲೆ ಕುದಿಸಿ ಬಳಿಕ ಆ ನೀರನ್ನು ಸೋಸಿ ತಣಿದ ಬಳಿಕ ಅದರಲ್ಲಿ ಮುಖ ತೊಳೆದುಕೊಳ್ಳಿ.
* ಮುಖದಲ್ಲಿ ತುರಿಕೆ ಕಾಣಿಸಿಕೊಂಡರೆ 1 ಸ್ಪೂನ್ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಬೆರೆಸಿ ಹಚ್ಚಿ 2 ನಿಮಿಷ ಸ್ಕ್ರಬ್ ಮಾಡಿದರೆ ನಿಮ್ಮ ತ್ವಚೆ ಅಂದದ ಜೊತೆ ಮೃದುವಾಗುತ್ತದೆ.
* ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಮೊಡವೆ ಮೇಲೆ ಮೆಲ್ಲನೆ ತಿಕ್ಕಿ, ನಂತರ ಆ ರಸ ಒಣಗಿದ ಮೇಲೆ ಮುಖ ತೊಳೆಯಿರಿ. ಹೀಗೆ ಮಾಡಿದರೆ ಆಕರ್ಷಕ ತ್ವಚೆ ಕಾಂತಿ ಪಡೆಯುವುದರಲ್ಲಿ ಎರಡು ಮಾತಿಲ್ಲ.