ಉಡುಪಿ: ಅನ್ಲಾಕ್ ಬಳಿಕ ಎಲ್ಲವೂ ತೆರೆದಂತಾಗಿದ್ದು, ಇದರಿಂದ ಜನರ ಓಡಾಟವೂ ಹೆಚ್ಚಾಗಿದೆ. ಮಾತ್ರವಲ್ಲದೆ ಕೊರೊನಾ ಲೆಕ್ಕಿಸದೆ ಜನ ಪ್ರವಾಸಕ್ಕೆ ತೆರಳುತ್ತಿದ್ದು, ಸಾಮಾಜಿಕ ಅಂತರವನ್ನು ಮರೆತು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ವೀಕೆಂಡ್ ಹಿನ್ನೆಲೆ ಉಡುಪಿಯ ಮಲ್ಪೆ ಬೀಚ್ನಲ್ಲಿ ಸಹ ಹೆಚ್ಚು ಜನ ಸೇರಿದ್ದು, ಕೊರೊನಾ ಮರೆತು ಮಜಾ ಮಾಡುತ್ತಿದ್ದಾರೆ.
Advertisement
ನೂರಾರು ಪ್ರವಾಸಿಗರು ಮಲ್ಪೆ ಬೀಚಿನಲ್ಲಿ ವೀಕೆಂಡ್ ಎಂಜಾಯ್ ಮಾಡುತ್ತಿದ್ದು, ನೀರಿಗಿಳಿದ ಮೇಲೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸಲು ಸಾಧ್ಯವಿಲ್ಲ. ಆದರೂ ಇದನ್ನು ಲೆಕ್ಕಿಸದೆ ಪ್ರವಾಸಿಗರು ಮಸ್ತ್ ಮಜಾ ಮಾಡುತ್ತಿದ್ದಾರೆ. ಕುಟುಂಬದವರ ಜೊತೆ ಹಾಗೂ ಸ್ನೇಹಿತರೊಂದಿಗೆ ಹಲವು ಜನ ಆಗಮಿಸಿ ಬೀಚ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ವೇಳೆ ಕೊರೊನಾ ನಿಯಮಗಳನ್ನು ಸಹ ಗಾಳಿಗೆ ತೂರುತ್ತಿದ್ದಾರೆ.
Advertisement
Advertisement
ನಾಲ್ಕೈದು ತಿಂಗಳು ಮನೆಯೊಳಗೆ ಇದ್ದು ಬೇಜಾರಾಗಿತ್ತು. ಕಿರಿಕಿರಿ ಅನುಭವಿಸಿದ್ದೆವು. ಹೀಗಾಗಿ ಸ್ವಲ್ಪ ಎಂಜಾಯ್ ಮಾಡಲೆಂದು ಪ್ರವಾಸಕ್ಕೆ ಬಂದಿದ್ದೇವೆ. ಇಂದು ಮಲ್ಪೆ ಬೀಚ್ಗೆ ಬಂದಿದ್ದೇವೆ. ತುಂಬಾ ದಿನಗಳ ಬಳಿಕ ದೂರ ಪ್ರಯಾಣ ಮಾಡಿದಂತಾಗಿದೆ ಎಂದು ಪ್ರವಾಸದ ಅನುಭವ ಹಂಚಿಕೊಂಡಿದ್ದಾರೆ.
Advertisement
ಬೀಚ್ನಿಂದ ಹೊರ ಬಂದ ಬಳಿಕ ಸಹ ಬಹುತೇಕರು ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಪ್ರವಾಸಿಗರಿಂದಲೇ ಮತ್ತೆ ಕೊರೊನಾ ಹೆಚ್ಚಾಗುತ್ತದೆಯಾ ಎಂಬ ಆತಂಕ ಈಗ ಮೂಡಿದೆ. ಚಿಕ್ಕಮಗಳೂರಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಯಾರೂ ಸಹ ಕೊರೊನಾ ನಿಯಮ ಪಾಲಿಸುತ್ತಿಲ್ಲ.